Slide
Slide
Slide
previous arrow
next arrow

ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸಚಿವರಿಗೆ ಮನವಿ

300x250 AD

ಯಲ್ಲಾಪುರ: ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ರಾಜ್ಯದಲ್ಲಿ ಏಕರೂಪ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಘಟಕದವರು ಮಂಗಳವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ನೀಡಿ ಆಗ್ರಹಿಸಿದರು.
ರಾಜ್ಯದಲ್ಲಿ 01/04/2006 ರಿಂದ ಹೊಸದಾಗಿ ಸರಕಾರಿ ಸೇವೆಗೆ ಸೇರಿದ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ನಿವೃತ್ತಿಯಾದ ನೌಕರರಿಗೆ ಈ ಯೋಜನೆಯಡಿ ಸಿಗುತ್ತಿರುವ ಪುಡಿಗಾಸು ಪಿಂಚಣಿಯಿ0ದ ನೌಕರರ ನಿವೃತ್ತಿಯ ನಂತರದ ಜೀವನಕ್ಕೆ ಮಾರಕವಾಗಿದೆ. ವೇತನದಲ್ಲಿ ಶೇ 10ರಷ್ಟು ಮೊತ್ತ ಕಡಿತಗೊಳಿಸಿ ಇದಕ್ಕೆ ಸರಕಾರದ ಶೇ 14ರಷ್ಟು ವಂತಿಕೆಯನ್ನು ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವದರಿಂದ ಗಳಿಸುವ ಆದಾಯದಲ್ಲಿ ಮಾಸಿಕ ಪಿಂಚಣಿ ನೀಡುವ ಯೋಜನೆ ಇದಾಗಿದೆ. ನಿವೃತ್ತಿಯ ದಿನಗಳಲ್ಲಿ ಮಾರುಕಟ್ಟೆಯ ಏರಿಳಿತದ ಮೇಲೆ ನಿರ್ಧಾರಿತವಾಗುವ ಪಿಂಚಣಿಯಿ0ದ ಪ್ರತಿ ತಿಂಗಳು ನಿಶ್ಚಿತ ಮೊತ್ತ ಸಿಗದೇ ಆರ್ಥಿಕ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಈ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿರುವುದರಿಂದ, ಈಗಾಗಲೇ ಎನ್.ಪಿ.ಎಸ್ ನೌಕರರು ಕೊರೊನಾ ಹಾವಳಿಯಿಂದ ಷೇರು ಮಾರುಕಟ್ಟೆಯ ಹೊಡೆತಕ್ಕೆ ಸಿಲುಕಿ ಎನ್.ಪಿ.ಎಸ್ ಖಾತೆಯಲ್ಲಿ 50 ಸಾವಿರದಿಂದ 80 ಸಾವಿರದವರೆಗೆ ಕಳೆದುಕೊಂಡಿದ್ದಾರೆ. ಈ ಯೋಜನೆಯ ವಿರುದ್ಧ ಕರ್ನಾಟಕ ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದಿಂದ ರಕ್ತ ಕೊಟ್ಟೆವು ಪಿಂಚಣಿ ಬಿಡೆವು ಘೋಷಣೆಯೊಂದಿಗೆ ಫ್ರೀಡಂ ಪಾರ್ಕನಲ್ಲಿ ಹೋರಾಟ, ಬೆಳಗಾವಿ ಚಲೋ 10 ಕಿಮೀ ಪಾದಯಾತ್ರೆ ಹೊರಾಟಗಳನ್ನು ಮಾಡಲಾಗಿದೆ.
ಪ್ರಸ್ತುತ ನಮ್ಮ ಸಂಘಟನೆಯು ಹೋರಾಟವನ್ನು ತೀವ್ರಗೊಳಿಸಿದ್ದು, ಕರ್ನಾಟಕ ಸರಕಾರಿ ಎನ್.ಪಿ.ಎಸ್ ನೌಕರರ ಸಂಘ ಯಲ್ಲಾಪುರ ತಾಲೂಕು ಘಟಕದಿಂದ ಯಲ್ಲಾಪುರದ ತಹಶೀಲ್ದಾರ ಕಚೇರಿಯಿಂದ ಡಾ.ಬಿ ಆರ್ ಅಂಬೇಡ್ಕರ ವೃತ್ತದ ಮಾರ್ಗವಾಗಿ ಸಚಿವರ ನಿವಾಸದವರೆಗೆ ಎನ್.ಪಿ.ಎಸ್ ನೌಕರರು ಕುಟುಂಬ ಸಮೇತರಾಗಿ ಹಳೆ ಪಿಂಚಣಿ ಹಕ್ಕೊತ್ತಾಯ ಶಾಂತಿಯುತ ಪಾದಯಾತ್ರೆ ಕೈಗೊಂಡಿರುತ್ತೇವೆ. ಆದರಿಂದ ತಾವುಗಳು ನಮ್ಮ ನೋವನ್ನು ಗಂಬೀರವಾಗಿ ಪರಿಗಣಿಸಿ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ನಮ್ಮ ಡಿಸೆಂಬರ 19 ರ ಮಾಡು ಇಲ್ಲವೆ ಮಡಿ ಹೋರಾಟಕ್ಕೂ ಮೊದಲೇ ರಾಜ್ಯದ ಸಮಸ್ತ ಎನ್.ಪಿ.ಎಸ್. ನೌಕರರ ಬಾಳಿನ ಬೆಳಕಾದ ಹಳೆ ಪಿಂಚಣಿಯನ್ನು ಘೋಷಿಸುವಂತೆ ಒತ್ತಾಯಿಸಿ 4 ಲಕ್ಷ ಸರ್ಕಾರಿ, ನಿಗಮ ಮಂಡಳಿಗಳ ಎನ್.ಪಿ.ಎಸ್ ನೌಕರರು 20 ಲಕ್ಷ ಅವಲಂಬಿತರ ಜೀವನಕ್ಕೆ ದಾರಿ ದೀಪವಾಗಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಸರಕಾರಿ ಎನ್.ಪಿ.ಎಸ್ ನೌಕರರ ಸಂಘದತಾಲೂಕು ಘಟಕದ ಅಧ್ಯಕ್ಷ ವಿಶಾಲ ನಾಯಕ, ಪ್ರಧಾನ ಕಾರ್ಯದರ್ಶಿ ನಾಗಪ್ಪ ವಿ.ಬಿ, ಖಜಾಂಚಿ ಪವನಕುಮಾರ, ಉಪಾಧ್ಯಕ್ಷ ಸಂತೋಷ ಮಿರಾಶಿ, ಜಂಟಿ ಕಾರ್ಯದರ್ಶಿಗಳಾದ ಪ್ರತಿಮಾ ಕೋಮಾರ, ಪ್ರಕಾಶ್ ಪೂಜಾರಿ ದಿನೇಶ್ ಭಟ್ ಮಹೇಶ್ ಸಂತೋಷ ಗಣಪತಿ ಭಾಗ್ವತ್ ಅಜಿತ್ ನಾಯಕ್ ಅಮಿತ್ ಚೌಹಾನ್, ವಿನಾಯಕ ಸಂತೋಷ ಮಾಸ್ತಿ ಮನೆ ಮಾರುತಿ ಆಚಾರಿ ನಯನ ತಂದೆಕರ್ ಶ್ರೀಲತಾ ದೀಪ ಶೇಟ್ ಹಾಗೂ ಇನ್ನಿತರರು ಮನವಿ ನೀಡುವ ಸಂದರ್ಭದಲ್ಲಿ ಇದ್ದರು. ಮನವಿ ಸ್ವೀಕರಿಸಿದ ಸಚಿವ ಶಿವರಾಮ ಹೆಬ್ಬಾರ್ ಮುಖ್ಯಮಂತ್ರಿಗಳ ಗಮನ ಸೆಳೆದು ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

300x250 AD
Share This
300x250 AD
300x250 AD
300x250 AD
Back to top