Slide
Slide
Slide
previous arrow
next arrow

ಕುಡಿಯುವ ನೀರಿನ ಬಾವಿಯಲ್ಲಿ ಡೀಸೆಲ್

300x250 AD

ಅಂಕೋಲಾ: ತಾಲೂಕಿನ ಮಠಾಕೇರಿ ಕ್ರಾಸ್ ಬಳಿ ಕುಡಿಯುವ ನೀರಿನ ಬಾವಿಗಳಲ್ಲಿ ಡೀಸೆಲ್ ಬಂದಿದೆ. ಈ ಬಗ್ಗೆ ಬಾವಿಯ ಮಾಲಕರು ಪುರಸಭೆಗೆ ದೂರು ನೀಡಿದ್ದಾರೆ.
ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ್ ನಾಯ್ಕರವರ ಮಾಲೀಕತ್ವದ 2 ಬಾವಿಗಳಲ್ಲಿ ಕುಡಿಯುವ ಶುದ್ಧ ನೀರು ದೊರೆಯುತ್ತಿತ್ತು. ಆದರೆ ಕಳೆದ 3 ದಿನಗಳಿಂದ ಬಾವಿಯ ನೀರು ಡೀಸೆಲ್ ವಾಸನೆ ಬರಲಾರಂಭಿಸಿದೆ. ಅಲ್ಲದೆ ನೀರನ್ನು ಸಹ ಕುಡಿಯಲಾಗುತ್ತಿಲ್ಲ. ಹೀಗಾಗಿ ಬಾವಿಯ ಮಾಲಕರು ಪುರಸಭೆಗೆ ದೂರು ನೀಡಿದ್ದಾರೆ.
ಕಳೆದ ವರ್ಷವೂ ಪಟ್ಟಣದ ಒಂದು ಪೆಟ್ರೋಲ್ ಪಂಪ್‌ನಿAದ ಡೀಸೆಲ್ ಬಾವಿಗೆ ಸೇರಿ ನೀರು ಕುಡಿಯಲಾರದಂತಾಗಿತ್ತು. ಈಗ ಮತ್ತೆ ಮಠಾಕೇರಿ ಬಾವಿಯಲ್ಲಿ ಇದೇ ಸಮಸ್ಯೆ ಎದುರಾಗಿದೆ. ಸಮೀಪದ ಡೀಸೆಲ್ ಪಂಪ್‌ನಿ0ದ ಈ ಡೀಸೆಲ್ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಎನ್.ಎಮ್.ಮೆಸ್ತಾ, ಆಹಾರ ನೀರಿಕ್ಷಕ ನವೀನ ನಾಯ್ಕ್, ಪುರಸಭಾ ನೀರು ಸರಬರಾಜು ಅಧಿಕಾರಿ ಆನಂದು ನಾಯ್ಕ್ ಭೇಟಿ ನೀಡಿ ಬಾವಿಯನ್ನು ಪರೀಕ್ಷಿಸಿದ್ದಾರೆ. ನೀರನ್ನು ಪರೀಕ್ಷೆಗಾಗಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿದ್ದಾರೆ. ಎಲ್ಲಿಂದ ಈ ಡೀಸೆಲ್ ಬರುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top