Slide
Slide
Slide
previous arrow
next arrow

ಮದುವೆಯಾಗಿ 7 ತಿಂಗಳಿಗೇ ನೇಣಿಗೆ ಶರಣಾದ ಮಹಿಳೆ

300x250 AD

ಅಂಕೋಲಾ: ತಾಲೂಕಿನ ಬೆಳಸೆ ಹಂದಿಗದ್ದೆಯಲ್ಲಿ 7 ತಿಂಗಳ ಹಿಂದೆ ಮದುವೆಯಾದ ಗೃಹಿಣಿಯೋರ್ವಳು ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ಘಟನೆ ನಡೆದಿದೆ.
ಯಮುನಾ ಗೌಡ (30) ನೇಣಿಗೆ ಶರಣಾದ ನತದೃಷ್ಟೆ. ಈ ಕುರಿತು ಮೃತಳ ಅಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯಮುನಾಳನ್ನು 7 ತಿಂಗಳ ಹಿಂದೆ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಗೌಡನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೂರು ತಿಂಗಳ ನಂತರ ಯಮುನಾಳ ಗಂಡ ವಿಘ್ನೇಶ್ವರನಿಗೆ ಮತ್ತು ಅವನ ತಮ್ಮನ ಹೆಂಡತಿಗೆ ಅಕ್ರಮ ಸಂಬಂಧ ಇರುವುದಾಗಿ ಯಮುನಾಳಿಗೆ ತಿಳಿದಿದೆ. ಈ ಕುರಿತು ಮನೆಯಲ್ಲಿ ಕೇಳಿದ್ದಕ್ಕೆ ಯಮುನಾಳ ಗಂಡ ವಿಘ್ನೇಶ್ವರ, ಮೈದುನನ ಹೆಂಡತಿ ಶಾಮಲಾ ಗೌಡ, ಮೈದುನ ರವಿ ಗೌಡ ಮತ್ತು ಅತ್ತೆ ಸಾವಿತ್ರಿ ಎಲ್ಲರೂ ಸೇರಿ ಯಮುನಾಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾರಂಭಿಸಿದ್ದಾರೆ.
ಅಲ್ಲದೇ ಮನೆಯಲ್ಲಿ ಇರಬೇಡ, ಎಲ್ಲಾದರೂ ಹೋಗಿ ಸಾಯಿ ಎಂದಿದ್ದಾರೆ. ಇದರಿಂದ ಮನನೊಂದ ಯಮುನಾ, ತನ್ನ ಮನೆಯಲ್ಲಿ ಪಕಾಸಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಮಹಜರು ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ ಉದಯ ಕುಂಬಾರ, ಪಿಎಸ್‌ಐ ಪ್ರವೀಣಕುಮಾರ, ಪ್ರೊಬೇಶನರಿ ಪಿಎಸ್‌ಐ ಸುನೀಲ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

300x250 AD
Share This
300x250 AD
300x250 AD
300x250 AD
Back to top