• Slide
    Slide
    Slide
    previous arrow
    next arrow
  • ಬಿಜೆಪಿಗೆ ಶ್ರೀನಿವಾಸ್ ಧಾತ್ರಿ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ ಅಧಿಕೃತ

    300x250 AD

    ಯಲ್ಲಾಪುರ: ಜಿಲ್ಲೆಯ ಮಹತ್ವದ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಬದಲಾವಣೆ ನಡೆಯುತ್ತಿದ್ದು, ಬಿಜೆಪಿ ಟಿಕೆಟ್ ಆಕಾಂಕ್ಷಿ, ಯುವ ಧುರೀಣ ಶ್ರೀನಿವಾಸ ಭಟ್ಟ ಧಾತ್ರಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

    ಶ್ರೀನಿವಾಸ ಭಟ್ಟ ಧಾತ್ರಿ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು, ತಮ್ಮ ಜನಪರ ಕಾಳಜಿ ಮತ್ತು ಕೆಲಸಗಳಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈಗ ಬಿಜೆಪಿಗೆ ರಾಜೀನಾಮೆ ನೀಡುವ ಮೂಲಕ ಸಚಿವ ಹೆಬ್ಬಾರೊಂದಿಗಿನ ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದಿದ್ದಾರೆ.

    300x250 AD

    ಇದಕ್ಕೂ ಮೊದಲು ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಇಚ್ಛೆ ವ್ಯಕ್ತಪಡಿಸಿದ್ದರು. ಇದೀಗ ಯಲ್ಲಾಪುರ ಬಿಜೆಪಿ ಯುವ ಧುರೀಣ ಎನಿಸಿದ್ದ ಶ್ರೀನಿವಾಸ ಧಾತ್ರಿ ಸಹ ಕಾಂಗ್ರೆಸ್ ಸೇರುವ ಮೂಲಕ ಹೆಬ್ಬಾರ್ ಗೆ ನೇರ ಸವಾಲೆಸೆಯುವ ಸಾಧ್ಯತೆ ಕಂಡುಬರುತ್ತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top