Slide
Slide
Slide
previous arrow
next arrow

ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ರಮಾ ನಾಯ್ಕ ವಯೋ ನಿವೃತ್ತಿ

300x250 AD

ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಕೋಲಾ ನಂ.2 (ಮಠಾಕೇರಿ) ಶಾಲೆಯಲ್ಲಿ ಶಿಕ್ಷಕಿಯಾಗಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿ, ವಯೋ ನಿವೃತ್ತಿ ಹೊಂದಿರುವ ರಮಾ ಅಜಿತ್ ನಾಯ್ಕರವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕವು ಅವರ ಮನೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮಾ ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನನಗೆ ನೀಡಿದ ಗೌರವ ಸಂತಸವನ್ನು ತಂದಿದೆ. ಸಂಘ ನೀಡಿದ ಗೌರವವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದೇನೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿ ಅವರಿಗೆ ಬದುಕನ್ನು ಕಟ್ಟಿಕೊಟ್ಟು ವಯೋ ನಿವೃತ್ತಿ ಹೊಂದುತ್ತಿರುವ ಈ ಸಂದರ್ಭದಲ್ಲಿ ಸಂಘ ಅವರನ್ನು ಗೌರವಿಸಿರುವುದು ಸಂಘಕ್ಕೆ ಹೆಮ್ಮೆಯನ್ನು ತಂದಿದೆ ಎಂದರು.
ಸಂಘದ ಉಪಾಧ್ಯಕ್ಷೆ ಭಾರತಿ ಬಿ.ನಾಯಕ, ಸದಸ್ಯರಾದ ಶೇಖರ್ ಗಾಂವಕರ, ಲಕ್ಷ್ಮಿ ನಾಯಕ, ಆನಂದು ವಿ.ನಾಯ್ಕ ಅಭಿನಂದಿಸಿ ಮಾತನಾಡಿದರು. ಸದಸ್ಯರಾದ ತುಕಾರಾಮ ಬಂಟ, ಸಂಜೀವ ಆರ್. ನಾಯಕ, ದಿವಾಕರ ದೇವನಮನೆ, ವೆಂಕಮ್ಮ ನಾಯಕ, ಮುಖ್ಯಾಧ್ಯಾಪಕಿ ಮುಕ್ತಾ ಎಸ್. ನಾಯಕ, ವೇಲಾಯುದನ್ ನಾಯರ್ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸದಸ್ಯೆ ಶೋಭಾ ಎಸ್.ನಾಯಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top