• Slide
    Slide
    Slide
    previous arrow
    next arrow
  • ವಿಶ್ವದರ್ಶನ ಪಿಯು ಕಾಲೇಜಿನಲ್ಲಿ ವಿಜ್ಞಾನ- ಗಣಿತ ಶಿಕ್ಷಕರ ಕಾರ್ಯಾಗಾರ

    300x250 AD

    ಯಲ್ಲಾಪುರ: ವಿಶ್ವದರ್ಶನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಗಾಗಿ ಪ್ರೌಢಶಾಲಾ ಹಂತದ ಪಠ್ಯಕ್ರಮದಲ್ಲಿ ಬರುವ ಕ್ಲಿಷ್ಟಕರ ವಿಷಯದ ಬಗ್ಗೆ ಎರಡು ದಿನಗಳ ಕಾರ್ಯಾಗಾರದ ನಡೆಯಿತು.
    ಸಾಗರ ಅಧ್ಯಯನ ಕೇಂದ್ರದನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಕರು ತಮ್ಮ ಜ್ಞಾನವನ್ನು ಸದಾ ಹೆಚ್ಚಿಸಿಕೊಳ್ಳುವ ರೀತಿಯಲ್ಲಿ ಇಂಥ ಕಾರ್ಯಗಳು ಶ್ಲಾಘನೀಯ ಮತ್ತು ಇಂತಹ ಕಾರ್ಯಾಗಾರಗಳು ಅವರ ಪ್ರತಿ ಹಂತದ ಜೀವನದಲ್ಲಿ ಬೋಧನೆಗೆ ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಹಿಸಿ, ದೂರದ ಊರಿನಲ್ಲಿ ದೊರೆಯುವ ಎಲ್ಲಾ ರೀತಿಯ ಜ್ಞಾನ ಸೌಲಭ್ಯಗಳನ್ನು ನೀಡುವ ಆಶಯದೊಂದಿಗೆ ಹುಟ್ಟಿಕೊಂಡ ನಮ್ಮ ಕನಸಿನ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಈ ಭಾಗದ ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಬದುಕಿಗೆ ಬೇಕಾದ ಮುನ್ನಡೆಯನ್ನು ನೀಡುವ ಸಂಸ್ಥೆಯಾಗಲಿದೆ ಎಂದರು.
    ವೇದಿಕೆಯಲ್ಲಿ ವಿಜ್ಞಾನ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಜಯ್ ನಾಯಕ್, ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್., ಶಿಕ್ಷಣ ಕಾಲೇಜಿನ ಡಾ.ಎಸ್.ಎಲ್.ಭಟ್ ಹಾಗೂ ವಿಶ್ವದರ್ಶನ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು. ಜಿಲ್ಲಾ ಕರಾವಿಪದ ಸಂಚಾಲಕ ಎಂ.ರಾಜಶೇಖರ್ ಸ್ವಾಗತಿಸಿದರು. ಪ್ರಾಂಶುಪಾಲ ಡಿ.ಕೆ.ಗಾಂವಕರ್ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ರಮೇಶ್ ನಾಯಕ್ ನಿರ್ವಹಿಸಿದರು.
    ವಿಜ್ಞಾನ ವಿಷಯಕ್ಕೆ ಸಾಗರ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ್, ವೈಟಿಎಸ್‌ಎಸ್ ಪ್ರೌಢಶಾಲೆಯ ನಿವೃತ್ತ ಪ್ರಾಂಶುಪಾಲ ಜಯರಾಮ ಗುನಗಾ, ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ವಿನಾಯಕ್ ಭಟ್, ಗಣಿತ ವಿಷಯಕ್ಕೆ ನಿವೃತ್ತ ಗಣಿತ ಉಪನ್ಯಾಸಕ ಎಮ್.ಎನ್.ಹೆಗಡೆ ಹಾಗೂ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ರಂಜಿತಾ ನಾಯ್ಕ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
    ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಗಾಂವಕರ್ ವಹಿಸಿದ್ದರು ಹಾಗೂ ಕಾರ್ಯಕ್ರಮವನ್ನು ಉಪನ್ಯಾಸಕ ಸಚಿನ ಟಿ.ಭಟ್ ನಿರ್ವಹಿಸಿದರು. ಯಲ್ಲಾಪುರ ಮತ್ತು ಮುಂಡಗೋಡದ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಎಲ್ಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಹಾಗೂ ವಿಶ್ವದರ್ಶನ ಪದವಿಪೂರ್ವ ಕಾಲೇಜಿನ ಬಿಇಡಿ ವಿದ್ಯಾರ್ಥಿಗಳು ಸೇರಿ ಸುಮಾರು 150ಕ್ಕೂ ಅಧಿಕ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಶಿಕ್ಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದ ಸಂಯೋಜಕರು ಹಾಗೂ ಉಪಪ್ರಾದೇಶಿಕ ಕೇಂದ್ರದ ಸದಸ್ಯ ಕಾರ್ಯದರ್ಶಿ ಸಂಜೀವ ದೇಶಪಾಂಡೆ ಕಾರ್ಯಕ್ರಮದ ನೇತೃತ್ವ ವಹಿಸಿ ಉಸ್ತುವಾರಿ ವಹಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top