• Slide
    Slide
    Slide
    previous arrow
    next arrow
  • ಡಿ.6ರಿಂದ ದತ್ತ ಜಯಂತಿ ಉತ್ಸವ

    300x250 AD

    ಕುಮಟಾ: ತಾಲೂಕಿನ ಕುಂಭೇಶ್ವರ ರಸ್ತೆಯ ಶ್ರೀದತ್ತ ಮಂದಿರದಲ್ಲಿ ಡಿ.6ರಿಂದ 8ರವರೆಗೆ ದತ್ತ ಜಯಂತಿ ಉತ್ಸವ, ದತ್ತ ಯಾಗ ಸೇರಿದಂತೆ ವಿಶೇಷ ಧಾರ್ಮಿಕ ಅನುಷ್ಠಾನಗಳು ನಡೆಯಲಿವೆ ಎಂದು ದತ್ತ ಮಂದಿರದ ವ್ಯವಸ್ಥಾಪಕ ಅರ್ಚಕ ವೇ.ದತ್ತಾತ್ರೇಯ ಭಟ್ ತಿಳಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಿಲಾಮಂದಿರದಲ್ಲಿ ಪ್ರಪ್ರಥಮ ಬಾರಿಗೆ ದತ್ತ ಜಯಂತಿ ಉತ್ಸವ ನಡೆಯಲಿದೆ. ಈ ವರ್ಷದ ದತ್ತ ಜಯಂತಿಯನ್ನು ಜನ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಲಾಗಿದೆ. ಈ ಉತ್ಸವ ಶುಭಕೃತ್ ಸಂವತ್ಸರದ ಮಾರ್ಗಶಿರ ಶುದ್ಧ ತ್ರಯೋದಶಿ ಮಂಗಳವಾರದಿ0ದ ಹುಣ್ಣಿಮೆ ಗುರುವಾರದವರೆಗೆ ನಡೆಯಲಿದೆ. ಸತ್ಯಸಾಯಿ ಭಜನಾ ಮಂಡಳಿಯಿ0ದ ಭಜನೆ ಕಾರ್ಯಕ್ರಮ, ಗಣಪತಿ ಪೂಜೆ ಹಾಗೂ ಇತರ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಬುಧವಾರ ದತ್ತ ಜಯಂತಿ ನಿಮಿತ್ತ ನವನಿರ್ಮಿತ ತೊಟ್ಟಿಲಲ್ಲಿ ಶ್ರೀ ದತ್ತ ಜಯಂತಿ ಜನ್ಮೋತ್ಸವ ನಡೆಯಲಿದೆ. ಅಷ್ಟಾವಧಾನ ಪೂಜೆ ವಿದ್ವಾನ್ ವಿಶ್ವೇಶ್ವರ ಭಟ್ಟ ಖರ್ವಾರವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ವಿಶೇಷ ಪಾದುಕ ಪೂಜೆ, ಸಾಮೂಹಿಕ ಸತ್ಯ ದತ್ತ ವೃತ ಸಹಿತ ಸತ್ಯನಾರಾಯಣ ಪೂಜೆ, ಶ್ರೀದತ್ತ ಭಜನಾ ಮಂಡಳಿಯವರಿAದ ಭಜನೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು.
    ಶಿಲಾ ದತ್ತ ಮಂದಿರ ಸಮಿತಿಯ ಅಧ್ಯಕ್ಷ ಸತೀಶ್ ಎಸ್ ನಾಯ್ಕ ಮಾತನಾಡಿ, ಈ ಕಾರ್ಯಕ್ರಮಕ್ಕೆ ವಿಶೇಷ ಸೇವಾ ನೀಡುವವರು ಮಹಾಪೋಷಕರು 5001, ಪೋಷಕರು 3001, ಅನ್ನದಾನ ಸಹಿತ ಮಹಾಪೂಜೆ 2001, ಮಹಾಪೂಜೆ 1001 ಭಕ್ತಾದಿಗಳು ಅನುಷ್ಠಾನ ಕಾರ್ಯಕ್ರಮಕ್ಕೆ ವಂತಿಗೆಯನ್ನು ನೀಡಬಹುದು. ವಿಶೇಷ ದತ್ತ ಜಯಂತಿ ಮಹೋತ್ಸವಕ್ಕೆ ಎಲ್ಲರೂ ಸಕುಟುಂಬ ಪರಿವಾರ ಸಮೇತ ಆಗಮಿಸಿ ಶ್ರೀ ಗುರುವಿನ ಸೇವಾ ಕಾರ್ಯಗಳಲ್ಲಿ ತನು ಮನ ಧನಪೂರ್ವಕ ಭಾಗವಹಿಸಿ ಗುರುವಿನ ಪೂರ್ಣ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿದರು.
    ಸುದ್ದಿಗೋಷ್ಠಿಯಲ್ಲಿ ಶಿಲಾ ದತ್ತ ಮಂದಿರ ಸಮಿತಿಯ ಪ್ರಮುಖರಾದ ಅರುಣ ಸಿ.ಮಣಕಿಕರ್, ರಾಮರಾಯ ಕಾಮತ್, ಚಂದ್ರಕಾಂತ್ ಶೇಟ್, ಅರುಣ್ ನಾಯ್ಕ, ರಾಜು ಶೆಟ್ಟಿ, ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top