ಹಿರೇಗುತ್ತಿ: ಇಲ್ಲಿನ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿಗಳಿಗೆ ಕಳೆದ 12 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರಕೃತಿ ಶಿಬಿರದ (ನೇಚರ್ ಕ್ಯಾಂಪ್) 2022-23ನೇ ಸಾಲಿನ ಪ್ರಕೃತಿ ಇಕೋ ಕ್ಲಬ್ ವತಿಯಿಂದ ಸಂದೀಪ ನಾಯಕ ಹಾಗೂ ನಾಗರಾಜ ನಾಯಕ ಆಂದ್ಲೆ ಅವರ ತೋಟದಲ್ಲಿ ನಡೆಯಿತು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರ ಮೇಲುಸ್ತುವಾರಿಯಲ್ಲಿ ಪ್ರಕೃತಿ ಶಿಬಿರದಲ್ಲಿ 3 ತಂಡಗಳಾಗಿ ವಿಂಗಡಿಸಿ ಎಲ್ಲಾ ತಂಡಗಳು ಸೂಪರ್ ಮಿನಿಟ್, ಹಗ್ಗ ಜಗ್ಗಾಟ, ಗಡಿಗೆ ಒಡೆಯುವುದು, ಪಿರಾಮಿಡ್ ರಚನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕರಾದ ನಾಗರಾಜ ಜಿ.ನಾಯಕ ಉಸ್ತುವಾರಿಯಲ್ಲಿ ಶಿಸ್ತಿನಿಂದ ಅಚ್ಚುಕಟ್ಟಾಗಿ ನೆರವೇರಿಸಿಲಾಯಿತು.
ವಿದ್ಯಾರ್ಥಿಗಳು ಗೊಲ್ಲರು, ಬೇಡರು ಮತ್ತು ಕೊಂಗರು ಎಂಬ ಮೂರು ತಂಡಗಳನ್ನು ರಚಿಸಿ ಭಾಗವಹಿಸಲು ಅವಕಾಶ ನೀಡಲಾಯಿತು. ಕೊಂಗರು ತಂಡದ ನಾಯಕರಾದ ಸುಜನ ಅಂಬಿಗ ಮತ್ತು ಪದ್ಮಾವತಿ ಗೌಡ ಪ್ರಥಮ ಸ್ಥಾನ, ಗೊಲ್ಲರು ತಂಡದ ನಾಯಕರಾದ ಸಂಜಯ ಹಳ್ಳೇರ ಮತ್ತು ಪ್ರತಿಮಾ ಗೌಡ ದ್ವಿತೀಯ ಸ್ಥಾನ, ಬೇಡರು ತಂಡದ ನಾಯಕರಾದ ಎಮ್.ಜಿ.ನಾಗಭೂಷಣ ಮತ್ತು ಕಾಂಚಿಕಾ ನಾಯಕ ತೃತೀಯ ಸ್ಥಾನ ಪಡೆದರು. ಈ ಮೂರು ತಂಡದ ನಾಯಕರಿಗೆ ಬಹುಮಾನ ನೀಡಲಾಯಿತು.
ಹೈಸ್ಕೂಲ್‌ಗೆ ಧ್ವನಿವರ್ಧಕ ದೇಣಿಗೆ ನೀಡಿದ ಸುಬ್ರಾಯ ಬೊಮ್ಮಯ್ಯ ನಾಯಕ ಖಂಡಗಾರ ಅವರನ್ನು ಸನ್ಮಾನಿಸಿದ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕಾಂತ ನಾಯಕ ಮಾತನಾಡಿ, ಸುಬ್ರಾಯ ನಾಯಕರ ಸಾಮಾಜಿಕ ಸೇವೆ ನಿರಂತರವಾಗಿರಲಿ, ಪ್ರತಿ ವರ್ಷವೂ ಪ್ರಕೃತಿ ಇಕೋ-ಕ್ಲಬ್ ವತಿಯಿಂದ ನೇಚರ್ ಕ್ಯಾಂಪ್ ಮಾಡುವುದು ನಮ್ಮ ಶಾಲೆಯ ವಿಶೇಷವಾಗಿದೆ. ನಾವೆಲ್ಲ ಪರಿಸರದ ಮಕ್ಕಳು ಎಂಬುದೇ ನಿಜವಾದರೆ ಬೇರೆಯವರನ್ನು ಕಾಯುವ ಪ್ರಶ್ನೆಯಿಲ್ಲ. ಮಾತಿಗಿಂತ ಕೃತಿ ಮೇಲು ಅದಕ್ಕಾಗಿ ಕಾಡು ಬೆಳೆಸುವುದು, ನೈರ್ಮಲ್ಯ ಕಾಪಾಡುವುದು ಹೀಗೆ ಯಾವೆಲ್ಲ ಕ್ರಮ ಅಗತ್ಯವಿದೆಯೋ ಅವೆಲ್ಲವನ್ನು ವಿದ್ಯಾರ್ಥಿಗಳು ಯುವಕರೂ ಆದ ನಾವು ಹಿರಿಯರ ಮಾರ್ಗದರ್ಶನದಲ್ಲಿ ಕೈಗೊಳ್ಳಬೇಕಿದೆ, ಅಂದಾಗ ಮಾತ್ರ ‘ಮೆನ್ ಮೇ ಬಿ ಕ್ರೂಯಲ್ ಬಟ್ ಮ್ಯಾನ್ ಈಸ್ ಕೈಂಡ್’ ಎಂಬ ನಾಣ್ಣುಡಿ ಅರ್ಥ ಪೂರ್ಣವಾಗುವುದು ಎಂದರು.
ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ರಮಾನಂದ ಜಿ.ಪಟಗಾರ ಈ ಅರ್ಥಪೂರ್ಣ ಕಾರ್ಯಕ್ರಮದ ಪ್ರಯೋಜನ ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು. ವಿದ್ಯಾರ್ಥಿ ತಂಡಗಳಿAದ ವಿವಿಧ ಮನೋರಂಜನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆದವು.
ಈ ಕ್ಯಾಂಪ್ ಯಶಸ್ವಿಯಾಗಲು ಸಹಕರಿಸಿದ ಆಡಳಿತ ಮಂಡಳಿಯ ಅಧ್ಯಕ್ಷ ಹೊನ್ನಪ್ಪ ನಾಯಕ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಮುಂಜಾನೆಯ ಚಹಾ ತಿಂಡಿ ವ್ಯವಸ್ಥೆ ಮಾಡಿದ ಶಿಕ್ಷಕರಾದ ಬಾಲಚಂದ್ರ ನಾಯಕ ಹಾಗೂ ಬಾಲಚಂದ್ರ ಅಡಿಗೋಣ, ಬಹುಮಾನ ಪ್ರಾಯೋಜಕತ್ವ ವಹಿಸಿದ ಶ್ರೀಕಾಂತ ನಾಯಕ, ಯಶೋದಾ ಶಾಂತಾ ನಾಯಕ, ಜಗದೀಶ(ಪಪ್ಪು) ನಾಯಕ, ಗುರುರಾಜ ನಾಯಕರಿಗೆ ಧ್ವನಿವರ್ಧಕ ದೇಣಿಗೆ ನೀಡಿದ ಸುಬ್ರಾಯ ನಾಯಕ, ಊಟದ ವ್ಯವಸ್ಥೆ ಮಾಡಿದ ಹೈಸ್ಕೂಲಿನ ಎಲ್ಲಾ ಶಿಕ್ಷಕ ವೃಂದದವರಿಗೆ, ಸ್ಥಳಾವಕಾಶ ನೀಡಿದ ಸಂದೀಪ ನಾಯಕ ಹಾಗೂ ನಾಗರಾಜ ನಾಯಕರಿಗೆ, ಹಗ್ಗಜಗ್ಗಾಟದ ಸಂಪೂರ್ಣ ವ್ಯವಸ್ಥೆ ಮಾಡಿದಂತಹ ತಿಮ್ಮಣ್ಣ ಗೌಡರಿಗೆ ಸಹಕರಿಸಿದ ಸರ್ವರಿಗೂ ಪ್ರಕೃತಿ ಇಕೋಕ್ಲಬ್‌ನ ಮಾರ್ಗದರ್ಶಕ ಶಿಕ್ಷಕರಾದ ಮಹಾದೇವ ಬಿ.ಗೌಡ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಜಯರಾಮ ನಾಯಕ ಆಂದ್ಲೆ ಹಾಗೂ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ನಾಗರಾಜ ಜಿ ನಾಯಕ, ಬಾಲಚಂದ್ರ ವಿ ಹೆಗಡೇಕರ್, ಎನ್.ರಾಮು ಹಿರೇಗುತ್ತಿ, ಜಾನಕಿ ಗೊಂಡ, ಶಿಲ್ಪಾ ನಾಯಕ, ಇಂದಿರಾ ನಾಯಕ, ಬಾಲಚಂದ್ರ ಅಡಿಗೋಣ, ಮದನ ನಾಯಕ, ಕವಿತಾ ಅಂಬಿಗ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಅಡುಗೆ ಸಿಬ್ಬಂದಿಗಳು, ಆಂದ್ಲೆ ಊರಿನ ನಾಗರಿಕರು ಉಪಸ್ಥಿತರಿದ್ದರು.