ಅಂಕೋಲಾ: ಈಡಿಗ ನಿಗಮ ರಚನೆ, ಶೇಂದಿಗೆ ಅನುಮತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಅವರು ಹಮ್ಮಿಕೊಂಡಿರುವ ಜನೆವರಿ 6ರಿಂದ ಮಂಗಳೂರಿನಿ0ದ ಬೆಂಗಳೂರಿನವರೆಗೆ ನಡೆಯಲಿರುವ ಐತಿಹಾಸಿಕ ಪಾದಯಾತ್ರೆಯನ್ನು ಯಶಸ್ವಿಗೊಳಿಸುವುದಕ್ಕಾಗಿ ಉ.ಕ. ಜಿಲ್ಲಾ ವಿವಿಧ ಸಮಿತಿಯನ್ನು ರಚಿಸಿದ್ದಾರೆ.
ಉಲ್ಲಾಸ ನಾಯ್ಕ ಮೊರಳ್ಳಿ ಪಾದಯಾತ್ರೆ ಸಮಿತಿಯ ಜಿಲ್ಲಾಧ್ಯಕ್ಷರಾಗಿ ನೇಮಕವಾದರೆ, ಉಪಾಧ್ಯಕ್ಷರಾಗಿ ಸಿದ್ದಾಪುರದ ವೀರಭದ್ರ ನಾಯ್ಕ, ಕಾರವಾರದ ವಿಕ್ರಮ್ ನಾಯ್ಕ, ಕಾರ್ಯದರ್ಶಿಯಾಗಿ ಸಿದ್ದಾಪುರದ ನಾಗರಾಜ ನಾಯ್ಕ, ಸದಸ್ಯರಾಗಿ ಸುರೇಶ ಎಸ್.ನಾಯ್ಕ ಅಂಕೋಲಾ, ಪಾದಯಾತ್ರೆ ರಾಜ್ಯ ಸಮಿತಿ ಮಾಧ್ಯಮ ಸಂಚಾಲಕರಾಗಿ ಅಂಕೋಲಾದ ನಾಗರಾಜ ನಾಯ್ಕ, ರಾಜ್ಯ ಪಾದಯಾತ್ರೆ ಸಮಿತಿಯ ಕಾರ್ಯದರ್ಶಿಯಾಗಿ ಸಚಿನ ನಾಯ್ಕ, ಸಹಕಾರ್ಯದರ್ಶಿಯಾಗಿ ರಾಘವೇಂದ್ರ ನಾಯ್ಕ, ಜಿಲ್ಲಾ ಸಮಿತಿ ಸದಸ್ಯರಾದ ದೇವೇಂದ್ರ ನಾಯ್ಕ, ಪಾದಯಾತ್ರೆ ಸಮಿತಿ ಜಿಲ್ಲಾ ಮಹಿಳಾಧ್ಯಕ್ಷೆಯಾಗಿ ಮಂಜುಳಾ ನಾಯ್ಕ ಅವರನ್ನು ಶಕ್ತಿಪೀಠದ ಕಾರ್ಯದರ್ಶಿ ವೆಂಕಟೇಶ ಗುಂಡಾನೋರ ನೇಮಕ ಮಾಡಿದ್ದಾರೆ.