ಯಲ್ಲಾಪುರ: ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಮಠಾಧೀಶರಾದ ಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಮಂಚಿಕೇರಿಯ ಗುರುವಂದನಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಿ.4ರಂದು ಮಂಚಿಕೇರಿಯ ಮಹಾಗಣಪತಿ ದೇವಸ್ಥಾನದಲ್ಲಿ ನಾಮಧಾರಿ ಸಮಾಜದ ಗುರುವಂದನೆ, ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕಾರ್ಮಿಕ ಸಚಿವರು ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗುರು ವಂದನಾ ಸಮಿತಿ ಅಧ್ಯಕ್ಷ ನರಸಿಂಹ ಎನ್.ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಅನಂತಕುಮಾರ್ ಹೆಗಡೆ, ಭಟ್ಕಳ ಶಾಸಕ ಸುನಿಲ ನಾಯ್ಕ, ಪಶ್ಚಿಮ ಘಟ್ಟ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಶಾಸಕರಾದ ಮಧು ಬಂಗಾರಪ್ಪ, ವಿ ಎಸ್ ಪಾಟೀಲ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಿರಸಿ ಸಹಾಯಕ ಕಮಿಷನರ ದೇವರಾಜ ನಾಯ್ಕ, ಶಿರಸಿ ಡಿವೈಎಸ್ಪಿ ರವಿ ನಾಯ್ಕ, ಉದ್ಯಮಿಗಳಾದ ಭೀಮಣ್ಣ ನಾಯ್ಕ, ಈಶ್ವರ ನಾಯ್ಕ, ಅಂಕೋಲಾ ನಾಮಧಾರಿ ಸಮಾಜದ ಅಧ್ಯಕ್ಷ ಮಂಜುನಾಥ ನಾಯ್ಕ, ಸಮಾಜದ ಮುಖಂಡ ಸೂರಜ ನಾಯ್ಕ (ಸೋನಿ), ನಾಗೇಶ ನಾಯ್ಕ(ಕಾಗಲ), ಸಾಮಾಜಿಕ ಕಾರ್ಯಕರ್ತ ಸಂತೋಷ ರಾಯಕರ, ಗ್ಲೋಬಲ್ ನಾಮಧಾರಿ ಸಂಘ ಬೆಂಗಳೂರಿನ ಅಧ್ಯಕ್ಷ ವಸಂತ ನಾಯ್ಕ, ವಲಯ ಅರಣ್ಯಾಧಿಕಾರಿಗಳಾದ ಶಿಲ್ಪಾ ನಾಯ್ಕ ಮತ್ತು ಮಂಜುನಾಥ ನಾಯ್ಕ, ನಿವೃತ್ತ ಡಿಎಫ್‌ಓ ಉದಯ ನಾಯ್ಕ, ಧರ್ಮಸ್ಥಳ ಸಂಘದ ಹನುಮಂತ ನಾಯ್ಕ, ಹೆಸ್ಕಾಂ ಅಧಿಕಾರಿ ರಮಾಕಾಂತ ನಾಯ್ಕ, ನಿವೃತ್ತ ಆರ್‌ಟಿಓಸಿಡಿ ನಾಯ್ಕ, ನಾರಾಯಣ ಗುರು ಸೇವಾ ಸಂಸ್ಥೆ ಅಧ್ಯಕ್ಷ ಟಿ.ಟಿ.ನಾಯ್ಕ, ಸ್ಕೊಡ್‌ವೇಸ್ ಸಂಸ್ಥೆ ಅಧ್ಯಕ್ಷ ವೆಂಕಟೇಶ ನಾಯ್ಕ, ವಕೀಲರಾದ ರವೀಂದ್ರ ನಾಯ್ಕ, ಪ್ರಮುಖರಾದ ಎ.ಜಿ.ನಾಯ್ಕ (ಭರಣಿ), ಶ್ರೀಗುರು ಸಹಕಾರಿ ಸಂಘದ ಅಧ್ಯಕ್ಷ ರವಿ ನಾಯ್ಕ, ಯುವ ನಾಮಧಾರಿ ಸಂಘದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಉದ್ಯಮಿ ಸತ್ಯಾ ನಾಯರ್, ಟೀಡ್ ಸಂಸ್ಥೆಯ ಅಧ್ಯಕ್ಷೆ ಮೋಹಿನಿ ಪೂಜಾರಿ, ಮಂಚಿಕೇರಿ ಸಮಾಜದ ಹಿರಿಯರಾದ ವಿ ಎಸ್ ನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ಗಣಪತಿ ನಾಯ್ಕ, ಜಿ.ಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ಸಮಾಜದ ಹಿರಿಯರಾದ ಸೀನಾ ಪೂಜಾರಿ ಹೊಟಗೇರಿ, ಕಂಪ್ಲಿ ಗ್ರಾ ಪಂ ಅಧ್ಯಕ್ಷ ವಿನಾಯಕ ಎಂ ನಾಯ್ಕ, ಹಾಸಣಗಿ ಗ್ರಾ.ಪಂ ಅಧ್ಯಕ್ಷ ಪುರಂದರ ಎನ್.ನಾಯ್ಕ, ಉಮ್ಮಚಗಿ ಗ್ರಾ.ಪಂ ಅಧ್ಯಕ್ಷೆ ರೂಪಾ ಪೂಜಾರಿ ವಿಶೇಷ ಅಹ್ವಾನಿತರಾಗಿದ್ದಾರೆ ಎಂದು ಗುರುವಂದನಾ ಸಮಿತಿಯ ಅಧ್ಯಕ್ಷ ನರಸಿಂಹ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ, ಪುರಂದರ ನಾಯ್ಕ, ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಸತೀಶ ನಾಯ್ಕ, ಆದರ್ಶ್ ನಾಯ್ಕ ತಿಳಿಸಿದ್ದಾರೆ.
ಬೆಳಿಗ್ಗೆ 9.30ಕ್ಕೆ ಉಮ್ಮಚಗಿಯ ನಯರಾ ಪೆಟ್ರೋಲ್ ಪಂಪಿನಿ0ದ ಬೈಕ್ ರ‍್ಯಾಲಿಯ ಮುಖಾಂತರ ಪ್ರವೇಶ ಹಾಗೂ ಮಂಚಿಕೇರಿಯ ಬಿಳಕಿ ಕ್ರಾಸ್‌ನಿಂದ ಪೂರ್ಣಕುಂಭ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.