ಶಿರಸಿ : ಮೊಸ್ಟ್ ಡೆಂಜರ್ಸ ಕಳ್ಳ ನವೀನ ಚೌಹಾಣ ಶಿರಸಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಮಂಜವಳ್ಳಿಯ ದೇಶಭಂಡಾರಿ ಅವರಿಗೆ ಸೇರಿದ ಮನೆಯ ಕೀಲಿಯನ್ನು ಮೀಟಿ ನಗದು ದೋಚಿ ಕಳ್ಳ ಪರಾರಿಯಾಗಿದ್ದನು. ಶಿರಸಿ ಸೇರಿದಂತೆ ಜಿಲ್ಲೆಯ ಹಲವು ಠಾಣೆಗಳಲ್ಲಿ ಮೊಸ್ಟ್ ವಾಂಟೆಡ್ ಆಗಿದ್ದ ಈತ, ಮತ್ತೆ ಈಗ ಪೋಲೀಸರ ಬಲೆಗೆ ಸಿಕ್ಕಿದ್ದಾನೆ. ಕಳ್ಳತನ ಮಾಡುವ ವೇಳೆಯಲ್ಲಿ ಯಾರಾದರೂ ಅಡ್ಡ ಬಂದರೇ ಮೆಣಸಿಪುಡಿ ಸೋಕಿ ಓಡಿಹೋಗುತ್ತಿದ್ದ ಎನ್ನಲಾಗಿದ್ದು, ಮಂಜವಳ್ಳಿ ಕಳ್ಳತನ ಪ್ರಕರಣದ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗಿ 6 ತಾಸಿನಲ್ಲಿ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಡಿ.ಎಸ್.ಪಿ.ರವಿ ನಾಯ್ಕ, ಸಿ.ಪಿ.ಐ.ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಗ್ರಾಮೀಣ ಠಾಣೆಯ ತನಿಖಾ ಪಿ.ಎಸ್.ಐ. ಪ್ರತಾಪ್ ಪಚ್ಚಪ್ಪ ಗೊಳ್, ಪಿ.ಎಸ್.ಐ. ಈರಯ್ಯ ಹಾಗೂ ಸಿಬ್ಬಂದಿಗಳಿಂದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಸಿ ಪೋಲೀಸರ ಬಲೆಗೆ ಮೋಸ್ಟ್ ಡೇಂಜರಸ್ ಕಳ್ಳ ನವೀನ್ ಚೌಹಾಣ್
