Slide
Slide
Slide
previous arrow
next arrow

ಕಾಂಗ್ರೆಸ್‌ನಲ್ಲಿನ ಬದಲಾವಣೆ ಹೈಕಮಾಂಡ್ ಮಾಡೋದು, ನಾನಲ್ಲ: ಮಂಕಾಳ ವೈದ್ಯ ಸ್ಪಷ್ಟನೆ

300x250 AD

ಭಟ್ಕಳ: ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಇಲ್ಲಿ ಎಲ್ಲ ಬದಲಾವಣೆಯನ್ನ ಹೈಕಮಾಂಡ್ ಮಾಡುತ್ತದೆಯೇ ವಿನಃ ಮಂಕಾಳ್ ವೈದ್ಯ ಮಾಡೋದಲ್ಲ ಎಂದು ಮಾಜಿ ಶಾಸಕ ಮಂಕಾಳ್ ವೈದ್ಯ ಹೇಳಿದ್ದಾರೆ.

ಅವರು ಗುರುವಾರದಂದು ಇಲ್ಲಿನ ಶಿರಾಲಿಯ ಹಳೆಕೋಟೆ ಹನುಮಂತ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರ ಪದಗ್ರಹಣದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿನ ಅಧ್ಯಕ್ಷರಾಗಿದ್ದ ಸಂತೋಷ ನಾಯ್ಕರು ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನ ಅಭಿನಂದಿಸುತ್ತೇನೆ ಮತ್ತು ನೂತನ ಅಧ್ಯಕ್ಷರನ್ನ ಸ್ವಾಗತಿಸುತ್ತೇನೆಂದರು. ಹಾಲಿ ಅಧ್ಯಕ್ಷ ವೆಂಕಟೇಶ ನಾಯ್ಕರ ತಂದೆ ನಾರಾಯಣ ನಾಯ್ಕರು 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದಾರೆ. ಅವರ ಮಗ ಕೆ.ಎನ್.ನಾಯ್ಕ ಪಕ್ಷದ ಅಧ್ಯಕ್ಷರಾಗಿ ದುಡಿದಿದ್ದಾರೆ. ಅವರ ಮಗ ದಿ.ಕಿಶೋರ ನಾಯ್ಕರ ಕೊಡುಗೆ ಪಕ್ಷಕ್ಕಿದೆ ಅಂತಹ ಕಾಂಗ್ರೆಸ್ಸಿನ ಇತಿಹಾಸವಿರುವ ಕುಟುಂಬದ ಸದಸ್ಯನನ್ನ ಕಾಂಗ್ರೆಸ್ಸಿನ ಕಾರ್ಯಕರ್ತರೇ ಆಯ್ಕೆ ಮಾಡಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಸಂತೋಷ ನಾಯ್ಕರ ಕುಟುಂಬವೇ ಬೇರೆ ವೆಂಕಟೇಶ ನಾಯ್ಕರ ಕುಟುಂಬವೇ ಬೇರೆ ಬೇರೆ ಎನ್ನುವ ಸ್ಪಷ್ಟನೆ ನೀಡಿದರು.

ನನಗೆ ಸರಕಾರ 50 ಸಾವಿರ ರೂ. ನೀಡುತ್ತಿದೆ. ಕಾರಣ ಶಾಸಕನಾಗಿ ಸೇವೆ ಮಾಡಿದ್ದಕ್ಕೆ ಅದು ಸಹ ನಿಮ್ಮೆಲರ ತೆರಿಗೆ ಹಣವಾಗಿದೆ. ನಾನು ಅದನ್ನು ನಮ್ಮ ಪಕ್ಷಕ್ಕೆ ಖರ್ಚು ಮಾಡುತ್ತಿದ್ದೇನೆ. ಈ ಹಿಂದಿನ ನನ್ನ ಅವದಿಯಲ್ಲಿನ ಬ್ಲಾಕ ಅಧ್ಯಕ್ಷರಿಂದ ಖರ್ಚು ಮಾಡಿಸಿಲ್ಲ. ಈಗ ಶಾಸಕನಿಲ್ಲದ ವೇಳೆಯಲ್ಲು ಸಹ ಖರ್ಚು ಮಾಡಿಸಲು ಅವಕಾಶ ಕೊಟ್ಟಿಲ್ಲ. ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾತ್ರ ಅವರ ಸ್ವಂತ ಹಣದಲ್ಲಿ ಕೆಲಸ ಮಾಡುತ್ತಿದ್ದಾರೆ. ನೂತನ ಬ್ಲಾಕ್ ಅಧ್ಯಕ್ಷರ ಆಯ್ಕೆಯು ಕಾರ್ಯಕರ್ತರದ್ದಾಗಿದೆ ಹೊರತು ಮಂಕಾಳ ವೈದ್ಯರ ಆಯ್ಕೆಯಲ್ಲ. ಇಲ್ಲಿ ಹಿಂದಿನ ಅಧ್ಯಕ್ಷ ಸಂತೋಷ ನಾಯ್ಕ ಅವರ ಕುಟುಂಬವೇ ಬೇರೆ, ಈಗಿನ ಅಧ್ಯಕ್ಷ ವೆಂಕಟೇಶ ನಾಯ್ಕ ಅವರ ಕುಟುಂಬವೇ ಬೇರೆ ಎಂಬುದು ಸ್ಪಷ್ಟವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ, ಭಟ್ಕಳ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಶಕ್ತಿ ನೀಡುವ ಉದ್ದೇಶದಿಂದ ಹೊಸ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ. ಹುದ್ದೆ ಸೀಮಿತವಲ್ಲ. ವರಿಷ್ಠರ ಆದೇಶದಂತೆ ಹುದ್ದೆ, ಸ್ಥಾನ ಮಾನ ಬದಲಾಗಲಿದೆ. ಇವೆಲ್ಲದರ ಮಧ್ಯೆ ಪಕ್ಷ ಸಂಘಟನೆಯ ಜವಾಬ್ದಾರಿಯುತ ಕೆಲಸ ನಿರಂತರವಾಗಿರಬೇಕು. ಹಿಂದಿನ ಅಧ್ಯಕ್ಷರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಪಕ್ಷ ಸಂಘಟಿಸುವ ಅವಕಾಶವನ್ನು ಉಳಿದ ನಿಷ್ಠಾವಂತ ಕಾರ್ಯಕರ್ತರಿಗೂ ನೀಡಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷರ ಆದೇಶವನ್ನ ಜಾರಿಗೊಳಿಸುವುದು ಜಿಲ್ಲಾಧ್ಯಕ್ಷರ ಕರ್ತವ್ಯವಾಗಿದೆ ಎಂದರು.

ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ಈ ಹಿಂದಿನ ಬ್ಲಾಕ್ ಅಧ್ಯಕ್ಷರಿಂದ ಜಿಲ್ಲಾ ಸಮಿತಿಯು ರಾಜೀನಾಮೆ ಪಡೆದುಕೊಂಡು ಪಕ್ಷ ಸಂಘಟನೆಯ ಉತ್ತಮ ಹುದ್ದೆ ನೀಡಬೇಕಾಗಿತ್ತು. ಪಕ್ಷ ಸಂಘಟನೆಯ ಜೊತೆಗೆ ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿರುವ ಸಂತೋಷ ನಾಯ್ಕ ಅವರನ್ನು ಗುರುತಿಸುವ ಕೆಲಸ ಜಿಲ್ಲಾ ಸಮಿತಿಯಿಂದ ಆಗಬೇಕಾಗಿತ್ತು. ಇದು ಪಕ್ಷಕ್ಕೆ ಪೆಟ್ಟು ಬೀಳಲಿದೆ. ಜಿಲ್ಲೆಯ ಯಾವೊಬ್ಬ ಬ್ಲಾಕ್ ಅಧ್ಯಕ್ಷರು ಸಹ ಕ್ರಿಯಾಶೀಲರಾಗಿಲ್ಲ ಎಂದು ಭೀಮಣ್ಣ ನಾಯ್ಕ ಅವರಲ್ಲಿ ಪ್ರಶ್ನಿಸಿದ ಅವರು, ಈ ಬಾರಿ ಕಾಂಗ್ರೆಸ್ ಭಟ್ಕಳ ಗೆಲ್ಲಬೇಕಾದರೆ ತಂಜೀ0 ಜೊತೆ ಸೇರಿ ಮುಸ್ಲಿಂ ಮತಗಳನ್ನು ಪಡೆಯುವ ಕೆಲಸ ಕಾಂಗ್ರೆಸ್‌ನಿ0ದ ಆದಲ್ಲಿ ಮಾತ್ರ ಗೆಲ್ಲಲಿದೆ ಎಂದು ಸ್ವಪಕ್ಷದ ಸಭೆಯಲ್ಲಿಯೇ ಕಿವಿಮಾತು ಹೇಳಿದರು.

300x250 AD

ಬ್ಲಾಕ್ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ವೆಂಕಟೇಶ ನಾಯ್ಕ, ನಮ್ಮ ಕುಟುಂಬವು ಕಾಂಗ್ರೆಸಗೆ ಮಾಡಿದ ಸೇವೆ ಸ್ಮರಿಸಿ ನನಗೆ ಈ ಅವಕಾಶ ಸಿಕ್ಕಿದೆ. ಇದು ಅವಿಸ್ಮರಣೀಯ ದಿನ ನನಗೆ ಎಂದ ಅವರು ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಲಿದ್ದೇನೆ ಎಂದರು. ಇದಕ್ಕೂ ಪೂರ್ವದಲ್ಲಿ ನೂತನ ಅಧ್ಯಕ್ಷ ವೆಂಕಟೇಶ ನಾಯ್ಕ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕಾಂಗ್ರೆಸ್ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಲಾಯಿತು.

ಆರಂಭದಲ್ಲಿ ಸೇವಾದಳದ ಅಧ್ಯಕ್ಷರಾದ ರಾಜೇಶ ನಾಯ್ಕ ಅತಿಥಿಗಳನ್ನ ಸ್ವಾಗತಿಸಿದರೆ ಕೊನೆಯಲ್ಲಿ ಹಿ.ವರ್ಗದ ಅಧ್ಯಕ್ಷ ವಿಷ್ಣು ದೇವಡಿಗ ವಂದಿಸಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರ.ಕಾ.ಎಸ್.ಕೆ.ಭಾಗವತ, ಅಲ್ಪ.ಸಂ. ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ, ಜಿಲ್ಲಾ ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾ.ಪಂ. ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಮಂಕಿಯ ಚಂದ್ರುಗೌಡ, ನಾಮಧಾರಿ ಮುಖಂಡ ವಾಮನ ನಾಯ್ಕ, ಶಿರಾಲಿ ಗ್ರಾಮ ಪಂ ಅಧ್ಯಕ್ಷೆ ರೇವತಿ ನಾಯ್ಕ, ಬೆಂಗ್ರೆ ಗ್ರಾಮ ಪಂ.ಅಧ್ಯಕ್ಷೆ ಬೇಬಿ ನಾಯ್ಕ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕ್ಟಯ್ಯ ಭೈರುಮನೆ,ಸೋಮಯ್ಯ ಗೊಂಡ,ಫರ್ಜಾನ ಸೌದಾಗರ,ಅಲ್ಬರ್ಟ ಡಿಕೋಸ್ತ, ಸಿಂಧು ನಾಯ್ಕ, ವಿಠ್ಠಲ ನಾಯ್ಕ ಉಪಸ್ಥಿತರಿದ್ದರು.

ಭಟ್ಕಳದಲ್ಲಿ 18 ಸಾವಿರ ವೋಟರ್ಸ್ ಹೆಸರು ಮಾಯ!

ರಾಜ್ಯದಲ್ಲಿ ಸದ್ಯ ವೋಟರ್ ಲಿಸ್ಟರ ಹಗರಣ ಬೆಳಕಿಗೆ ಬಂದಿದ್ದು, ಅದರಂತೆ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಒಟ್ಟು 18250ಕ್ಕೂ ಅಧಿಕ ವೋಟರ್ಸಗಳ ಹೆಸರನ್ನು ಡೀಲಿಟ್ ಮಾಡಲಾಗಿರುವ ಬಗ್ಗೆ ನಮ್ಮಲ್ಲಿ ದಾಖಲೆ ಸಹಿತ ಮಾಹಿತಿಯಿದ್ದು, ಈ ರೀತಿಯ ನಡೆಯು ಬಿಜೆಪಿಯ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ದಾಖಲೆಯನ್ನು ವೇದಿಕೆಯಲ್ಲಿ ಪ್ರದರ್ಶನ ಮಾಡಿದರು.

Share This
300x250 AD
300x250 AD
300x250 AD
Back to top