ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಸತೀಶ್ ಸೈಲ್‌ಗೆ ಬೆಂಬಲ ನೀಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಇಬ್ಬರೂ ನಾಯಕರ ಬೆಂಬಲಿಗರಲ್ಲಿ ಗೊಂದಲ ಮೂಡಿಸಿದೆ. ಅಸ್ನೋಟಿಕರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ನಡೆದ ಮೂರು ಚುನಾವಣೆಯಲ್ಲೂ ಸೈಲ್ ಹಾಗೂ ಆನಂದ್ ಇಬ್ಬರೂ ಬದ್ಧ ವೈರಿಗಳಂತೆ ಚುನಾವಣೆ ಎದುರಿಸಿದ್ದರು. ಆದರೆ ಹೀಗಿರುವವರು ಒಂದಾಗಿ ಚುನಾವಣೆ ನಡೆಸಲು ಸಾಧ್ಯವೇ ಎನ್ನುವ ಗೊಂದಲ ಬೆಂಬಲಿರನ್ನ ಕಾಡತೊಡಗಿದೆ. ಇನ್ನೊಂದೆಡೆ ನಾಯಕರು ಒಂದಾದರೆ ಬೆಂಬಲಿಗರ ಮತಗಳು ಒಂದಾಗುತ್ತದೆಯೇ ಎನ್ನುವ ಗೊಂದಲ ಸಹ ಸೃಷ್ಟಿಯಾಗಿದ್ದು, ಹೊಂದಾಣಿಕೆ ರಾಜಕೀಯ ಕೆಲವರಲ್ಲಿ ಅಸಮಾಧಾನಕ್ಕೆ ಸಹ ಕಾರಣವಾಗಿದೆ ಎನ್ನಲಾಗಿದೆ. ಆದರೆ ಚುನಾವಣೆ ಸಮಯದಲ್ಲಿ ಯಾವೆಲ್ಲ ಬದಲಾವಣೆ ಆಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.