Slide
Slide
Slide
previous arrow
next arrow

ಜನಮನ ರಂಜಿಸಿದ “ರಾವಣಾವಸಾನ”

300x250 AD

ಶಿರಸಿ: ಚಿಪಗಿಯ ಜಗನ್ನಾಥೇಶ್ವರ ದೇವಸ್ಥಾನದಲ್ಲಿ  ನಡೆದ ‘ರಾವಣಾವಸಾನ’ ಯಕ್ಷಗಾನ ಎಲ್ಲರನ್ನೂ ರಂಜಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮೃದಂಗ ವಾದಕರಾಗಿ ಮಂಜುನಾಥ ಕಂಚೀಮನೆ ಹಾಗೂ ಚಂಡೆ ವಾದಕರಾಗಿ ಗಜಾನನ ಸಾಂತೂರ್  ಸಹಕರಿಸಿದರು.
ಮುಮ್ಮೇಳದಲ್ಲಿ ರಾವಣನಾಗಿ ಸುಮಾ ಗಡಿಗೆಹೊಳೆ, ರಾಮನಾಗಿ ಸಹನಾ ಜೋಶಿ, ಲಕ್ಷ್ಮಣನಾಗಿ ಶೈಲಾ ದೊಡ್ಡೂರು ಮಂಡೋದರಿಯಾಗಿ ಜ್ಯೋತಿ ಹೆಗಡೆ, ದೇವೇಂದ್ರನಾಗಿ ತನ್ಮಯ್ ಹೆಗಡೆ, ವರುಣನಾಗಿ  ಅವನಿ ಭಟ್,  ವಿಭೀಷಣನಾಗಿ ಉಷಾ ಭಟ್, ಮಾತಲಿಯಾಗಿ ಭಾರತಿ ಹೆಗಡೆ, ದೂತ ಮತ್ತು ಮುನಿಯಾಗಿ ಸುನಂದಾ ಹೆಗಡೆ  ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಿರಂಜನ ಜಾಗನಳ್ಳಿ, ಸುಬ್ರಾಯ ಕೆರೆಕೊಪ್ಪ ಸಹಕಾರ ನೀಡಿದ್ದು, ಕಿಕ್ಕಿರಿದು ತುಂಬಿದ ಸಭಾಂಗಣವು ಕಾರ್ಯಕ್ರಮದ ಯಶಸ್ಸನ್ನು ಸಾಕ್ಷೀಕರಿಸಿದಂತಿತ್ತು. 

300x250 AD
Share This
300x250 AD
300x250 AD
300x250 AD
Back to top