ಶಿರಸಿ: ನಗರದ ಮಹಾದೇವ ಭಟ್ ಕೂರ್ಸೆ ಕಿವುಡು ಮಕ್ಕಳ ಶಾಲೆಯಲ್ಲಿ ಡಾ.ರವಿಕಿರಣ ಪಟವರ್ಧನ್ ಅವರಿಂದ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಮಕ್ಕಳ ಆರೋಗ್ಯದ ಸಾಮಾನ್ಯ ತಪಾಸಣೆಯನ್ನು ನಡೆಸಲಾಯಿತು.
ಸದಾ ಸಮಾಜದ ಮೇಲಿನ ಕಳಕಳಿಯಿಂದ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಡಾ.ಪಟವರ್ಧನ್ ರವರಿಂದ ಇಂತಹ ಕಾರ್ಯಗಳು ಇನ್ನಷ್ಟು ಹೆಚ್ಚೆಚ್ಚು ನಡೆಯಲಿ ಎಂಬ ಆಶಯದೊಂದಿಗೆ ಶಾಲೆಯ ಸಿಬ್ಬಂದಿ ವರ್ಗದವರು ಕೃತಜ್ಞತೆಗಳನ್ನು ತಿಳಿಸಿದರು.
ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಡಾ.ರವಿಕಿರಣ್ ಪಟವರ್ಧನರಿಂದ ಆರೋಗ್ಯ ತಪಾಸಣಾ ಶಿಬಿರ
