Slide
Slide
Slide
previous arrow
next arrow

ಕುಳವೆ ಪಂಚಾಯತ ಪಿಡಿಓ ವರ್ಗಾವಣೆ: ಹೃದಯಸ್ಪರ್ಶಿ ಬೀಳ್ಕೊಡುಗೆ

300x250 AD

ಶಿರಸಿ :   ತಾಲೂಕಿನ ಕುಳವೆ ಗ್ರಾಮ ಪಂಚಾಯತದಲ್ಲಿ ಕಳೆದ 8 ವರ್ಷಗಳಿಂದ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರೋಜಾ ನಾಯ್ಕ ಅವರು ಇತ್ತೀಚಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ  ಆತ್ಮೀಯವಾಗಿ ಬೀಳ್ಕೊಡಲಾಯಿತು.

ಮೂಲತಃ ಅಂಕೋಲಾದವರಾದ ಸರೋಜಾ ಅವರು ತಮ್ಮ ಜನಪರ ಕೆಲಸದಿಂದಲೇ ಸ್ಥಳೀಯವಾಗಿ ಸಾಕಷ್ಟು ಹೆಸರು ಮಾಡಿದ್ದರು. ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾಯತ ಸಭಾಭವನದಲ್ಲಿ ಚಿಕ್ಕದಾದ ಕಾರ್ಯಕ್ರಮ ಆಯೋಜನೆ ಮಾಡಿ ಅವರಿಗೆ ಬೀಳ್ಗೊಟ್ಟರು.

300x250 AD

ಗ್ರಾಮ ಪಂಚಾಯತ ಅಧ್ಯಕ್ಷ ವಿನಯ ಭಟ್, ಉಪಾಧ್ಯಕ್ಷೆ ಜ್ಯೋತಿ ನಾಯ್ಕ, ಸದಸ್ಯರಾದ ಸಂದೇಶ ಭಟ್ ಬೆಳಖಂಡ, ಶ್ರೀನಾಥ ಶೆಟ್ಟಿ, ಗಂಗಾಧರ ನಾಯ್ಕ, ರಂಜಿತಾ ಹೆಗಡೆ, ದೇವಿ ಹರಿಜನ, ಜಾನಕಿ ಹಸ್ಲರ್ ಇವರುಗಳ ಸಮ್ಮುಖದಲ್ಲಿ ನಿರ್ಗಮಿತ ಪಿಡಿಒ ಅವರನ್ನು ಸನ್ಮಾನಿಸಲಾಯಿತು. ಪ್ರಭಾರಿ ಪಿಡಿಒ ಸೌಮ್ಯ ಹೆಗಡೆ, ಪಂಚಾಯತ ಕಾರ್ಯದರ್ಶಿ ನಾಗರಾಜ, ಸಿಬ್ಬಂದಿಗಳಾದ ಶಾರದಾ ಹೆಗಡೆ, ರವಿ ಪಟಗಾರ, ಪ್ರತಿಭಾ ಹಾಗೂ ಗ್ರಾಮಸ್ಥರು ಇದ್ದರು. 

Share This
300x250 AD
300x250 AD
300x250 AD
Back to top