ದಾಂಡೇಲಿ: ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಡಿ ಮಹಿಳೆಯರಿಗಾಗಿ ಸೌಂದರ್ಯ ಅರಿವು ಕಾರ್ಯಕ್ರಮ ಮತ್ತು ‘ಸುಂದರ ಮಧುಮಗಳು’ ಎಂಬ ಹೆಸರಿನಡಿಯಲ್ಲಿ ಮೇಕಪ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ವಿಶೇಷವಾಗಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿರುವವರಿಗಾಗಿ ಆಯೋಜನೆ ಮಾಡಲಾಗಿದ್ದ ಈ ಸ್ಪರ್ಧೆಯಲ್ಲಿ ಬ್ಯೂಟಿಶಿಯನ್ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಅಂಜಲಿ ಬಾಂದೇಕರ್, ಪೂರ್ಣಿಮಾ ಗುಣವಂತೆ, ಸುಮಾ ಶೆಟ್ಟಿ, ಸ್ಮಿತಾ ಕುಲಕರ್ಣಿ, ಶೋಭಾ ಮಿರಾಶಿ, ಖುಷಿ ಮಿರಾಶಿ, ಇಂದಿರಾ ಉಮೇಶ್ ಮೊದಲಾದ ಸ್ಪರ್ಧಿಗಳು ಭಾಗವಹಿಸಿ, ಮಧುಮಗಳಂತೆ ಸುಂದರವಾಗಿ ಶೃಂಗಾರ ಮಾಡಿಕೊಂಡು ಸ್ಪರ್ಧೆಗೆ ವಿಶೇಷವಾದ ಮೆರುಗನ್ನು ತಂದುಕೊಟ್ಟರು. ಸ್ಪರ್ಧೆಯಲ್ಲಿ ರ‍್ಯಾಂಪ್ ವಾಕ್ ಎಲ್ಲರ ಗಮನ ಸೆಳೆಯಿತು.
ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ನೇಹಾ ಕಾಮತ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಇನ್ನರ್‌ವ್ಹೀಲ್ ಕ್ಲಬ್‌ನಿಂದ ಮಹಿಳೆಯರಿಗಾಗಿ ಸೌಂದರ್ಯ ಅರಿವು ಕಾರ್ಯಕ್ರಮ
