ಕಾರವಾರ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಹಳಿಯಾಳ ಹಾಗೂ ಜಿಸಿಬಿ ಇಂಡಿಯಾ ಜಂಟಿ ಸಹಯೋಗದಲ್ಲಿ ಸಹಯೋಗದಲ್ಲಿ 30 ದಿನಗಳ ಜೆಸಿಬಿ ಆಪರೇಟರ್ ಟ್ರೈನಿಂಗ್ ಹಾಗೂ ಎಲೆಕ್ಟ್ರಿಕಲ್ ಮೋಟರ್ ವೈಡಿಂಗ್ ಮತ್ತು ರಿಪೇರಿ, ಹಾಗೂ ರೆಫ್ರೀಜಿರೇಶನ್ & ಏರ್ ಕಂಡೀಶನ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ 18 ರಿಂದ 45 ವರ್ಷ ವಯೋಮಿತಿಯ ಯುವಕರು, ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಸೋಸ್ಕರ ವಿಳಾಸ, ಮೊಬೈಲ್ ಸಂಖ್ಯೆ ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈಗ ಮಾಡುತ್ತಿರುವ ಕೆಲಸ, ಇತ್ಯಾದಿ ವಿವರಗಳನ್ನು ಒಳಗೊಂಡು ಡಿಸೆಂಬರ್ 20ರೊಳಗೆ ಅರ್ಜಿಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ (ಆರ್) ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ ಇಲ್ಲಿಗೆ ಸಲ್ಲಿಸಬೇಕು. ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ ದೇಶಪಾಂಡೆ ಆರ್ ಸೆಟಿ ಹಳಿಯಾಳ ಸಂಸ್ಥೆ ದೂರವಾಣಿ ಸಂಖ್ಯೆ 08284298547, 8050741744, 9632143217, 9449782425 ಗೆ ಸಂಪರ್ಕಿಸಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಜೆಸಿಬಿ ಆಪರೇಟರ್ ಟ್ರೈನಿಂಗ್‌ಗೆ ಅರ್ಜಿ ಆಹ್ವಾನ
