Slide
Slide
Slide
previous arrow
next arrow

ಅನುದಾನಿತ ನೌಕರರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು ಆಗ್ರಹ

300x250 AD

ಶಿವಮೊಗ್ಗ: ಅನುದಾನಿತ ಶಿಕ್ಷಣ ಸಂಸ್ಥೆ  ನೌಕರರ ಸಹಕಾರ ಸಂಘದ ಸದಸ್ಯರ ಸಾಲದ ಮೊಬಲಗನ್ನು ಖಜಾನೆ-2ರಲ್ಲಿ ಕಡಿತಗೊಳಿಸಲು  ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಸಿಕೊಡುವಂತೆ ಆಗ್ರಹಿಸಿ ಅನುದಾನಿತ ನೌಕರರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ ಎಸ್.ಅವರ ನೇತೃತ್ವದ ನಿಯೋಗ ಪ.ಪೂ.ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು,  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

     ಈ ಮೊದಲು ಸಹಕಾರ ಸಂಘದಿಂದ ತೆಗೆದುಕೊಂಡ ಸಾಲಗಳ ಕಂತನ್ನು ಎಚ್.ಆರ್.ಎಂ.ಎಸ್.ಮೂಲಕ ಪ್ರತಿ ತಿಂಗಳೂ ಕಟಾಯಿಸುವ ಸೌಲಭ್ಯ ಇತ್ತು. ಖಜಾನೆ-2 ವ್ಯವಸ್ಥೆ ಬಂದಾಗಿನಿಂಗ ಸಾಲಗಳ ಕಂತನ್ನು ಕಟಾಯಿಸುವ ಸೌಲಭ್ಯ ಇಲ್ಲವಾಗಿದೆ. ಆ ಕಾರಣಕ್ಕೆ ಸಹಕಾರ ಸಂಘದಲ್ಲಿ ಸುಸ್ತಿದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಈಗಾಗಲೇ ಹಲವಾರು ಸಹಕಾರ ಸಂಘಗಳ, ಸಹಕಾರ ಬ್ಯಾಂಕುಗಳ, ತಾಲೂಕು ಪ್ರಾಥಮಿಕ ಶಿಕ್ಷಕರ ಪತ್ತಿನ ಸಹಕಾರ ಸಂಘ, ನಿ., ಹಾಗೂ ಸರಕಾರಿ ನೌಕರರ ಸೌಹಾರ್ದ ಪತ್ತಿನ ಸಹಕಾರ ಸಂಘದ ಸದಸ್ಯರ ಸಾಲದ ಕಂತಿನ ಕಡಿತಗಳು ಎಚ್.ಆರ್.ಎಂ.ಎಸ್.ನಲ್ಲಿ ಅಳವಡಿಕೆಯಾಗಿ ಖಜಾನೆ-2ರಲ್ಲಿ ಕಡಿತವಾಗುವಂತೆ ಎಚ್.ಆರ್.ಎಂ.ಎಸ್.ನಲ್ಲಿ ಕಡಿತಗೊಳಿಸಲು ಅವಕಾಶವಿರುತ್ತದೆ ಎಂಬುದನ್ನು ಅಧಿಕಾರಿಗಳ ಗಮನಕ್ಕೆ ಈ ನಿಯೋಗ ತಂದಿತು.

300x250 AD

ಈ ನಿಟ್ಟಿನಲ್ಲಿ ತಕ್ಷಣ ಕಾರ್ಯೋನ್ಮುಖರಾಗಿ ಅನುದಾನಿತರ ಸಹಕಾರ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಅಧಿಕಾರಿಗಳನ್ನು  ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷರಾದ ಬಿ.ಎಂ.ರಘು, ಮಾಜಿ ಅಧ್ಯಕ್ಷರಾದ ಡಿ.ಕೆ.ದಿವಾಕರ, ಡಾ.ಬಾಲಕೃಷ್ಣ ಹೆಗಡೆ, ಪ್ರಶಾಂತ ಎಸ್.ಎಚ್., ನಿರ್ದೇಶಕರಾದ ಪರಶುರಾಮಪ್ಪ, ಸುರೇಶ, ಜ್ಯೋತಿ, ಸದಸ್ಯರಾದ ಶಿವ್ಯಾ ನಾಯಕ, ಬಸವರಾಜ ಮೊದಲಾದವರು ನಿಯೋಗದಲ್ಲಿದ್ದರು.

Share This
300x250 AD
300x250 AD
300x250 AD
Back to top