ಕಾರವಾರ: ಚಿಕ್ಕಮಗಳೂರು ಜಿಲ್ಲೆಯ ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯು ಹಮ್ಮಿಕೊಂಡ ಮೂರು ದಿನಗಳ ತನ್ನ 36ನೇ ವಾರ್ಷಿಕ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಅರ್ಚನಾ ಕಾಮತ್ ಹಾಗೂ ಅವರ ಕುಟುಂಬದವರು ಸ್ಥಾಪಿಸಿರುವ ಪ್ರತಿಷ್ಠಿತ ‘ಸೂರ್ಯಕೀರ್ತಿ’ ಪ್ರಶಸ್ತಿಯನ್ನು ಖ್ಯಾತ ಶಾಸನ ತಜ್ಞ, ಇಂಜಿನೀಯರ್ ಡಾ.ಜಗದೀಶ ಅಗಸಿಬಾಗಿಲವರ ಅವರಿಗೆ ಪ್ರದಾನ ಮಾಡಲಾಯಿತು.
ಅಕಾಡೆಮಿಯ ಅಧ್ಯಕ್ಷರಾದ ಡಾ.ದೇವರಕೊಂಡಾರೆಡ್ಡಿ, ಗೌರವ ಕಾರ್ಯದರ್ಶಿ ಡಾ.ದೇವರಾಜಸ್ವಾಮಿ, ದೇವಸ್ಥಾನದ ಧರ್ಮದರ್ಶಿಗಳಾದ ಡಾ.ಭೀಮೇಶ್ವರ ಜೋಷಿ, ಡಾ.ಎಂ.ಜಿ.ನಾಗರಾಜ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಡಾ.ಬಾಲಕೃಷ್ಣ ಹೆಗಡೆ, ಡಾ.ಎಂ.ಕೊಟ್ರೇಶ, ಅಜಯಕುಮಾರ ಶರ್ಮಾ, ನಿಧಿನ ಓಲಿಕಾರ, ಡಾ.ಶೇಜೇಶ್ವರ ಆರ್. ಮೊದಲಾದವರು ಉಪಸ್ಥಿತರಿದ್ದರು.