ಶಿರಸಿ: ನಗರದ ಮಧುವನ ಹೋಟೆಲ್ ಆರಾಧನಾ ಸಭಾಭವನದಲ್ಲಿ ಶನಿವಾರ ನ.26 ರಂದು ಸ್ಥಳೀಯ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಹಾಗೂ ಕಾರವಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸ್ವರ ಸಂಗಮ’ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಕಾರವಾರ ಕನ್ನಡ ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೋಪೇಸರ್ ಕೆ,ವಿ. ಭಟ್ಟ ಹಾಗೂ ಶಿರಸಿ ರೋಟರಿ ಯ ಮಾಜಿ ಅಧ್ಯಕ್ಷ ವಿಷ್ಣು ಹೆಗಡೆ ಮತ್ತು ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಕಾಮರ್ಸ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಆರ್.ಜಿ. ಹೆಗಡೆ ಪಾಲ್ಗೊಳ್ಳಲಿದ್ದಾರೆ.
ಸಂಗೀತ ಕಾರ್ಯಕ್ರಮದ ಆರಂಭಿಕವಾಗಿ ಸುಮಂಗಲಾ ಎಂ. ಹೆಗಡೆ ಮಂಡೇಮನೆ, ಹೇಮಾ ಹೆಗಡೆ ಶಿರಸಿ, ಲತಾ ಹೆಗಡೆ ಶಿರಸಿ, ಜ್ಯೋತಿ ಹೆಗಡೆ, ಆಶಾ ಹೆಗಡೆ, ಇವರುಗಳಿಂದ ಭಗವದ್ಗೀತೆ ಪಠಣ ನಡೆಯಲಿದೆ. ಭಕ್ತಿ ಸಂಗೀತ ಕಾರ್ಯಕ್ರಮವಾಗಿ ಶಾಂತಲಾ ಆರ್. ಹೆಗಡೆ ತೇಜಸ್ವಿನಿ ಬಡಿಗಿ, ವಾಗ್ದೇವಿ ಭಟ್ಟ, ದೀಪ ವಸಂತ ನಾಯ್ಕ, ಧನ್ಯಗೌಡ, ಮಿನಾಕ್ಷಿ ಎಚ್. ಕೆ. ಗಿರಿಜಾ ನಾಡಿಗೇರ, ವಿಜಯಾ ದಾಸ್ ರವರು ಪಾಲ್ಗೊಂಡು ಹಾಡಲಿದ್ದಾರೆ.
ಕೊನೆಯಲ್ಲಿ ಆಮಂತ್ರಿತ ಕಲಾವಿದರಾಗಿ ಗಣಪತಿ ಹೆಗಡೆ ಯಲ್ಲಾಪುರ ಪಾಲ್ಗೊಳ್ಳಲಿದ್ದು ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಳ್ಳಿ, ತಬಲಾದಲ್ಲಿ ರಾಮದಾಸ ಭಟ್ಟ ಸಹಕರಿಸಲಿದ್ದಾರೆ. ಭಕ್ತಿ ಸಂಗೀತಕ್ಕೆ ಹಾರ್ಮೋನಿಯಂನಲ್ಲಿ ಗಾಯಕಿ ಶ್ರೀಮತಿ ರೇಖಾ ದಿನೇಶ ಹಾಗೂ ತಬಲಾ ಮತ್ತು ರಿದಮ್ ಪ್ಯಾಡನಲ್ಲಿ ಕಿರಣ ಹೆಗಡೆ ಕಾನಗೋಡ ಸಹಕಾರ ನೀಡಲಿದ್ದು ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜನನಿ ಸಂಸ್ಥೆಯ ದಿನೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.