• first
  second
  third
  Slide
  Slide
  previous arrow
  next arrow
 • ಪ್ಲೈಓವರ್, ಸರ್ವಿಸ್ ರಸ್ತೆ ನಿರ್ಮಿಸಲು ಒತ್ತಾಯ

  300x250 AD

  ಹೊನ್ನಾವರ: ಪಟ್ಟಣದಲ್ಲಿ ಪ್ಲೈಓವರ್ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವಂತೆ ಹೊನ್ನಾವರ ಉಳಿಸಿ ಬೆಳಿಸಿ ಸಂಘಟನೆಯ ವತಿಯಿಂದ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
  ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಮುಸ್ಲಿಂ ಸಮುದಾಯದವರೊಂದಿಗೆ ಸಮಾಲೋಚನಾ ಸಭೆಯ ಬಳಿಕ ಆಡಳಿತಸೌದದವರೆಗೆ ಮೆರವಣೆಗೆಯ ಮೂಲಕ ಸಾಗಿದರು. ಪಟ್ಟಣದಲ್ಲಿ ಎರಡು ಹೆದ್ದಾರಿ ಸೇರುವ ಗೇರುಸೊಪ್ಪಾ ಸರ್ಕಲ್, ಬಸ್ ನಿಲ್ದಾಣ ಕೋರ್ಟ್ ರಸ್ತೆ ಬಜಾರ ರಸ್ತೆ ಸಂದಿಸುವ ಶರಾವತಿ ವೃತ್ತದಲ್ಲಿ ಸುಗಮ ಸಂಚಾರಕ್ಕೆ ಪ್ಲೈ ಓವರ್ ಹಾಗೂ ಗ್ರಾಮೀಣ ಭಾಗದಿಂದ ಪಟ್ಟಣದ ವಿವಿಧಡೆ ಸಂಚರಿಸಲು ಸರ್ವಿಸ್ ರಸ್ತೆಯ ತೀರಾ ಅಗತ್ಯವಾಗಿದೆ ಎಂದು ತಿಳಿಸಿದರು.
  ಪ್ರತಿನಿತ್ಯ ಶಾಲಾ ಕಾಲೇಜಿಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. 25ಕ್ಕಿಂತಲೂ ಅಧಿಕ ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೋರ್ಟ್ ಮತ್ತು ಸರ್ಕಾರಿ ಕಛೇರಿ ಹಾಗೂ ಬ್ಯಾಂಕ್ ವ್ಯವಹಾರಕ್ಕೆ ಪಟ್ಟಣಕ್ಕೆ ಆಗಮಿಸುದು ಅನಿವಾರ್ಯವಾಗಿದೆ. ಪಟ್ಟಣದಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದೆ. ಈ ಹಿಂದೆಯೆ ಸಚೀವರಿಗೆ, ಶಾಸಕರಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿ ಮೂರು ತಿಂಗಳು ಕಳೆದರೂ ಪ್ರಯೋಜನವಾಗಿಲ್ಲ. ಈಗಾಗಲೇ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಘಟನೆಯ ಮೂಲಕ ಹಕ್ಕೊತ್ತಾಯದ ಮನವಿಗೆ ಸ್ಪಂದನೆ ದೊರೆತಿದೆ. ಈ ಬಗ್ಗೆ ಡಿ.15ರೊಳಗೆ ಕ್ರಮ ಜರುಗಿಸದೇ ಹೋದಲ್ಲಿ ಹಲವು ಸಂಘಟನೆ ಮತ್ತು ಸಾರ್ವಜನಿಕರ ಸಹಕಾರದ ಮೇರೆಗೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
  ತಹಶೀಲ್ದಾರ ನಾಗರಾಜ ನಾಯ್ಕಡ್ ಮನವಿ ಸ್ವೀಕರಿಸಿದರು. ಸಂಘಟನೆಯ ಅಧ್ಯಕ್ಷ ಜಿ.ಎನ್.ಗೌಡ, ಜೆಡಿಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top