• first
  second
  third
  Slide
  Slide
  previous arrow
  next arrow
 • ಹೆದ್ದಾರಿ ಸಮಸ್ಯೆ: ಉಪವಿಭಾಗಾಧಿಕಾರಿಯಿಂದ ಪರಿಶೀಲನೆ

  300x250 AD

  ಹೊನ್ನಾವರ: ತಾಲೂಕಿನ ಮಂಕಿ ಭಾಗದಿಂದ ಪಟ್ಟಣದವರೆಗೆ ಬೀದಿದೀಪ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆಯ ಕುರಿತು ಸಾರ್ವಜನಿಕರ ಒತ್ತಾಯದ ಮೇರೆಗೆ ಉಪವಿಭಾಗಾಧಿಕಾರಿ ಮಂಗಳವಾರ ಪರಿಶೀಲನೆ ನಡೆಸಿದರು.
  ತಾಲೂಕಿನಲ್ಲಿ ಐಆರ್‌ಬಿ ಕಂಪನಿ ನಿರ್ಮಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀದಿದೀಪ ಅಳವಡಿಕೆ ಮತ್ತು ಗಟಾರ, ಸರ್ವಿಸ್ ರಸ್ತೆ ಸೇರಿದಂತೆ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸುವಂತೆ ವಿವಿಧ ಸಂಘಟನೆ ಹಾಗೂ ಗ್ರಾ.ಪಂ ಈ ಹಿಂದೆಯೇ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರು ಸೋಮವಾರ ಅಧಿಕಾರಿಗಳು, ಸಂಘ- ಸಂಸ್ಥೆಯ ಪ್ರತಿನಿಧಿಗಳೊಡನೆ ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದರು. ಐಆರ್‌ಬಿ ಕಂಪನಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಮಗ್ರ ಮಾಹಿತಿ ಪಡೆದು, ತಾಲೂಕಿನ ಪ್ರಮುಖ ಸ್ಥಳಕ್ಕೆ ಅಧಿಕಾರಿಗಳ ಜೊತೆ ಆಗಮಿಸಿ ಮಾಹಿತಿ ಪಡೆಯುದಾಗಿ ಭರವಸೆ ನೀಡಿದ್ದರು.
  ಅದರಂತೆ ಮಂಕಿ ಅಸ್ಪತ್ರೆಯಿಂದ- ಚಿತ್ತಾರ ಕ್ರಾಸ್‌ವರೆಗೆ ದಾರಿದೀಪ ಅಳವಡಿಕೆ ಹಾಗೂ ಬಸ್ ನಿಲ್ದಾಣ ವ್ಯವಸ್ಥೆ, ಕೆಳಗಿನೂರ ಗ್ರಾ.ಪಂ. ವ್ಯಾಪ್ತಿಯ ಇಡಗುಂಜಿ ಕ್ರಾಸ್ ಹತ್ತಿರ ಹೈ-ಮಾಸ್ಕ್ ದೀಪ ಅಳವಡಿಕೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗೆ ಬಸ್ ನಿಲ್ದಾಣ ನಿರ್ಮಾಣ, ಕೆರೆಮನೆ ಹಕ್ಕಲಕೇರಿ ಸ.ಹಿ.ಪ್ರಾ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ವ್ಯವಸ್ಥೆ, ಗುಣವಂತೆ ಸರ್ಕಲ್ ಮತ್ತು ಅಭಿತೋಟ ಶಾಲೆಯ ಹತ್ತಿರ ಚರಂಡಿ ನಿರ್ಮಿಸಿ ಮೇಲ್ಸೇತುವೆ, ಕೆಳಗಿನೂರು ಬೀಚ್ ರಸ್ತೆಯ ಸಮೀಪ ಹೈ-ಮಾಸ್ಕ್ ಲೈಟ್ ಮತ್ತು ಕಾಸರಕೋಡ ಪೆಟ್ರೋಲ್ ಪಂಪ್‌ನವರೆಗೆ ಸ್ಟ್ರೀಟ್ ಲೈಟ್ ಅಳವಡಿಕೆ ಕೆಳಗಿನೂರು ಸೊಸೈಟಿ ಕ್ರಾಸ್ ಹತ್ತಿರ ಮೇಲ್ಸೇತುವೆ ಹಾಗೂ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ, ಇಕೋ ಬೀಚ್ ಹಾಗೂ ಟೊಂಕಾ ಕ್ರಾಸ್ ಬಳಿ ದಾರಿದೀಪ ವ್ಯವಸ್ಥೆಯ ಜೊತೆ ಸರ್ವಿಸ್ ರಸ್ತೆಯ ಬಗ್ಗೆ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು. ಹೆದ್ದಾರಿ ಸಮಸ್ಯೆ ಬಗ್ಗೆ ತಾಲೂಕಿನ ವಿವಿಧ ಭಾಗದಲ್ಲಿ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು. ಹಲವು ಬೇಡಿಕೆಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಈ ವೇಲೆ ಅವರು ತಿಳಿಸಿದರು.
  ಈ ಸಂದರ್ಭದಲ್ಲಿ ಕೆಳಗಿನೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ, ಕಾಸರಕೋಡ ಗ್ರಾ.ಪಂ. ಅಧ್ಯಕ್ಷ ಮಂಜು ಗೌಡ, ತಹಶೀಲ್ದಾರ್ ನಾಗರಾಜ್ ನಾಯ್ಕಡ್, ಸಿಪಿಐ ಶ್ರೀಧರ ಎಸ್.ಆರ್. ಕರುನಾಡು ವಿಜಯಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ಪ್ರಧಾನ ಕಾರ್ಯದರ್ಶಿ ಗಿರೀಶ ನಾಯ್ಕ ಪಡಿಕಲ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಹುಲ್, ಕಾಸರಕೋಡ-ಕೆಳಗಿನೂರ ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top