ಶಿರಸಿ: ತಾಲೂಕಿನ ಚಿಪಗಿಯ ಶ್ರೀ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ನವೆಂಬರ್ 25, ಶುಕ್ರವಾರ ಸಾಯಂಕಾಲ 5:00 ಗಂಟೆಗೆ ‘ಯಕ್ಷಕಲಾ ಸಂಗಮ’ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕಲಿಕಾ ಕೇಂದ್ರ ಶಿರಸಿ ಇವರಿಂದ ‘ರಾವಣಾವಸಾನ’ ಯಕ್ಷಗಾನವು ಪ್ರದರ್ಶನಗೊಳ್ಳಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ್ ಭಟ್ ತುಳಗೇರಿ,ಮದ್ದಳೆಯಲ್ಲಿ ಮಂಜುನಾಥ್ ಕಂಚಿಮನೆ, ಚಂಡೆಯಲ್ಲಿ ಗಜಾನನ ಸಂತೂರ್ ಉಪಸ್ಥಿತರಿರಲಿದ್ದು, ಮುಮ್ಮೇಳದಲ್ಲಿ ರಾವಣ ಪಾತ್ರಧಾರಿಯಾಗಿ ಸುಮಾ ಗಡಿಗೆಹೊಳೆ, ರಾಮನಾಗಿ ಸಹನಾ ಜೋಶಿ, ಲಕ್ಷ್ಮಣನಾಗಿ ಶೈಲಾ ದೊಡ್ಡೂರು, ಮಂಡೋದರಿಯಾಗಿ ಜ್ಯೋತಿ ಹೆಗಡೆ, ದೂತನಾಗಿ ಸುನಂದಾ ಹೆಗಡೆ, ವಿಭೀಷಣನಾಗಿ ಉಷಾ ಭಟ್, ದೇವೇಂದ್ರನಾಗಿ ತನ್ಮಯ್ ಹೆಗಡೆ, ವರುಣನಾಗಿ ಅವನಿ ಭಟ್ಟ, ಮಾತಲಿಯಾಗಿ ಭಾರತಿ ಬೊಮ್ಮನಳ್ಳಿ ಕಾಣಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವ ಕಲಾಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.