ಭಟ್ಕಳ: ಗಂಡು ಮಕ್ಕಳಿಲ್ಲದ ತಂದೆಯ ಅಂತ್ಯಕ್ರಿಯೆಯನ್ನ ಹಿರಿಯ ಮಗಳೇ ನೆರವೇರಿಸಿರುವ ಘಟನೆ ತಾಲೂಕಿನ ಹಡೀಲು ಸಬ್ಬತ್ತಿಯಲ್ಲಿ ನಡೆದಿದೆ.
ಮಂಜುನಾಥ ನಾಯ್ಕ್ (51) ಎಂಬುವವರು ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೋಮವಾರ ಗೃಹಪ್ರವೇಶ ಮುಗಿಸಿ ಮಂಗಳವಾರ ಮನೆಯ ಬಳಿ ಮರಕ್ಕೆ ಲುಂಗಿ ಕಟ್ಟಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ.
ಹೀಗಾಗಿ ಮೂವರ ಪೈಕಿ ಹಿರಿಯ ಮಗಳು ಶ್ವೇತಾ ತಂದೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನಗಳನ್ನು ಮುಗಿಸಿದ್ದಾಳೆ. ಗಂಡು ಮಕ್ಕಳೇ ಅಂತಿಮ ಸಂಸ್ಕಾರ ಮಾಡಬೇಕೆಂಬ ಅಕಾರ ಸಂಪ್ರದಾಯವನ್ನು ಮುರಿದು ಶ್ವೇತಾ ನೋವಲ್ಲೂ ದಿಟ್ಟತನ ಮೆರೆದಿದ್ದಾಳೆ.
ತಂದೆಯ ಚಿತೆಗೆ ಹಿರಿ ಮಗಳಿಂದ ಅಗ್ನಿಸ್ಪರ್ಶ
