Slide
Slide
Slide
previous arrow
next arrow

ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪುಸ್ತಕಗಳು ಮಾರ್ಗದರ್ಶಿ: ವೆಂಕಟೇಶ ಮೂರ್ತಿ

300x250 AD

ಕಾರವಾರ: ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಪುಸ್ತಕಗಳು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಉತ್ತಮ ಮಾರ್ಗದರ್ಶನವನ್ನು ನೀಡಬಲ್ಲವು ಎಂದು ಬರಹಗಾರರು ಹಾಗೂ ಶಿಕ್ಷಣ ತಜ್ಞ ವೆಂಕಟೇಶ ಮೂರ್ತಿ (ಮೂರ್ತಿ ಸರ್) ಹೇಳಿದರು.
ಅವರು ದಿವೇಕರ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನ.14ರಿಂದ 20ರವರೆಗೆ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಗ್ರಂಥಾಲಯವು ಗಣಕೀಕೃತಗೊಂಡಿದೆ. ಜೊತೆಗೆ ವಿದ್ಯುನ್ಮಾನ- ನಿಯತಕಾಲಿಕೆಗಳು, ವಿದ್ಯುನ್ಮಾನ- ಪುಸ್ತಕಗಳು ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗುತ್ತವೆ ಎಂದರು.
ಇಂದಿನ ಜಾಗತಿಕ ಬದಲಾವಣೆ ಜೊತೆಗೆ ಗ್ರಂಥಾಲಯದಲ್ಲಿ ಬದಲಾಗುತ್ತಿರುವ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಗ್ರಂಥಪಾಲಕ ಸುರೇಶ ಬಿ.ಗುಡಿಮನಿ ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ಗ್ರಂಥಾಲಯದಲ್ಲಿ ಲಭ್ಯವಿದ್ದ ಪುಸ್ತಕ, ನಿಯತಕಾಲಿಕೆ, ವಿದ್ಯುನ್ಮಾನ ನಿಯತಕಾಲಿಕೆ, ವಿಶ್ವಕೋಶ, ಶಬ್ದಕೋಶ ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಕೇಶವ ಕೆ.ಜಿ. ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಗ್ರಂಥಾಲಯದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಹಲವಾರು ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳು, ಅಷ್ಟೆ ಅಲ್ಲದೆ ಗಣಿಕೀಕೃತವಾದ ನಮ್ಮ ಗ್ರಂಥಾಲಯ ವೆಬ್ಸೆöÊಟ್‌ನಲ್ಲಿ ಪುಸ್ತಕಗಳು ಲಭ್ಯವಿರುತ್ತವೆ. ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಅದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ತೋಳೆ, ಜಿ.ಎಚ್.ಚಾರೋಡಿ ಹಾಗೂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top