ಶಿರಸಿ: ಜನ್ಮಜಾತ ದೋಷದಿಂದ ಹಣೆಯ ಮೇಲೆ ಹೆಚ್ಚಿನ ಮಾಂಸ ಬೆಳೆದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕರುವನ್ನು ಒಂದೂವರೆ ಘಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬದುಕಿಸಿದ ಘಟನೆ ತಾಲೂಕಿನ ಮತ್ತಿಘಟ್ಟದಲ್ಲಿ ನಡೆದಿದೆ.
ಇಲ್ಲಿನ ಡಿ.ಆರ್.ಭಟ್ ಎಂಬುವವರ ಮನೆಯಲ್ಲಿನ ಗೀರ್ ಜಾತಿಯ ಹಸುವಿಗೆ ಕರು ಹುಟ್ಟಿದ್ದು, ಅದರ ಮುಖದ ಮೇಲೆ ಬೃಹದಾಕಾರದ ಮಾಂಸ ಬೆಳೆದು ನಿಂತಿತ್ತು. ಇದರಿಂದ ಕರುವು ದೈನಂದಿನ ಚಟುವಟಿಕೆ ಸಹ ನಡೆಸಲಾಗದ ಸ್ಥಿತಿಯಲ್ಲಿತ್ತು.
ಹೀಗಾಗಿ ನಗರದ ಸಮರ್ಪಣ ಪಶು ಆಸ್ಪತ್ರೆಯ ವೈದ್ಯ ಡಾ.ಪಿ.ಎಸ್.ಹೆಗಡೆ ಹಾಗೂ ಡಾ.ಸುಬ್ರಾಯ ಭಟ್ಟರವರು ಒಂದೂವರೆ ಘಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಮುಖದ ಮೇಲೆ ಬೆಳೆದಿದ್ದ ಹೆಚ್ಚುವರಿ ಚರ್ಮವನ್ನು ತೆಗೆದು ಕರುವನ್ನು ರಕ್ಷಿಸಿದ್ದಾರೆ.