ಕಾರವಾರ: ವಿಶೇಷ ಚೇತನರಿಗೆ ಪ್ರಮಾಣ ಪತ್ರ ನೀಡಲು ತೊಂದರೆ ಕೊಡದೇ, ಸರ್ಕಾರದಿಂದ ಸಿಗುವ ಸೌಲಭ್ಯ ಜನರಿಗೆ ತಲುಪಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಶಾಸಕಿ ರೂಪಾಲಿ ಎಸ್.ನಾಯ್ಕ ಎಚ್ಚರಿಕೆ ನೀಡಿದರು.
ತಹಶೀಲ್ದಾರರ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥಪಡಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳಾದ ವೃದ್ಧಾಪ್ಯದ ವೇತನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಜನರಿಗೆ ತಲುಪಬೇಕು. ಸಮಸ್ಯೆಯನ್ನು ನಿವಾರಿಸಿ ಯೋಜನೆಯ ಲಾಭವನ್ನು ಜನರಿಗೆ ನೀಡಬೇಕು ಎಂದರು.
ಮಾಜಾಳಿ ವ್ಯಾಪ್ತಿಯಲ್ಲಿ ಮೀನುಗಾರರ ದೋಣಿಗಳಿಗೆ ಸೀಮೆ ಎಣ್ಣೆ ವಿತರಿಸದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ಅವರಿಗೆ ಸೀಮೆ ಎಣ್ಣೆ ಪೂರೈಕೆ ಮಾಡುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಡವಾಡ ಕುಂಬಾರವಾಡ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದ್ದು, ಕೈಗಾ ಮುಖ್ಯರಸ್ತೆಯ ಪೈಪ್ಲೈನ್ ನಿಂದ ನೀರನ್ನು ಪೂರೈಸುವಂತೆ ತಾ.ಪಂ.ಇಒ ಅವರಿಗೆ ಸೂಚಿಸಿದರು.
ಬೀದಿಬದಿ ವ್ಯಾಪಾರ ಮಾಡುವವರಿಗೆ ಜಾಗದ ಸಮಸ್ಯೆ ಇರುವುದರಿಂದ ನನ್ನನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದನ್ನು ಮುತುವರ್ಜಿವಹಿಸಿ ಮೊದಲಿನಿಂದ ಕುಳಿತುಕೊಳ್ಳುತ್ತಿದ್ದ ಜಾಗವನ್ನು ನೋಡಿಕೊಂಡು ಅನುಕೂಲ ಕಲ್ಪಿಸಬೇಕು ಎಂದು ಪೌರಾಯುಕ್ತರಿಗೆ ಹಾಗೂ ಡಿವೈಎಸ್ಪಿ ಅವರಿಗೆ ತಿಳಿಸಿದರು.
ಖಾರ್ಗೆಜೂಗ ರಸ್ತೆ ನಿರ್ಮಾಣ ವಿಳಂಬವಾಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದು, ಇದನ್ನು ಕೂಡಲೆ ಪ್ರಾರಂಭಿಸಬೇಕು. ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಇಂಜೀನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಗೋಟೆಗಾಳಿ ಭೈರಾ ಗ್ರಾಮಸ್ಥರಿಗೆ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಮಸ್ಯೆಯಾದಾಗ ಸರಿಯಾಗಿ ಸ್ಪಂಧಿಸುತ್ತಿಲ್ಲ ಎಂಬ ದೂರುಬರುತ್ತಿದೆ. ಇದಕ್ಕಾಗಿ ಹೆಸ್ಕಾಂ ಎಇಇ ಅವರಿಗೆ ತರಾಟೆಗೆ ತೆಗೆದುಕೊಂಡು. ಆ ಭಾಗದಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಕಂಬಗಳನ್ನು ಅಳವಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ, ತಹಶೀಲ್ದಾರರು, ಪೌರಾಯುಕ್ತರು, ತಾ.ಪಂ.ಇಒ, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವಿಶೇಷ ಚೇತನರಿಗೆ ಪ್ರಮಾಣ ಪತ್ರ ನೀಡಲು ತೊಂದರೆ ಕೊಡದಿರಿ: ಶಾಸಕಿ ರೂಪಾಲಿ ನಾಯ್ಕ
