ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದವರು ಕಾಲೇಜಿನ ವಿದ್ಯಾರ್ಥಿ ಪಾಲಕರ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸಭೆಯನ್ನು ನಡೆಸಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.
ಪಾಲಕರು ಮಾತನಾಡಿ, ದೂರದಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದರಿಂದ ಕಾಲೇಜು ವತಿಯಿಂದಲೇ ಒಂದು ಕ್ಯಾಂಟೀನ್ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನು ಹೊರತುಪಡಿಸಿದರೆ ಇಲ್ಲಿಯ ಉಪನ್ಯಾಸಕವೃಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಈ ಹಿಂದಿನ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನೀಡಿ ಮುಂದೆ ಹಳೆಯ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಸಂಘ ಇನ್ನಷ್ಟು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದರು.
ನ್ಯಾಕ್ ತಂಡದ ಅಧ್ಯಕ್ಷ ಪ್ರೊ. ಬೋದಾ ವೆಂಕಟರತ್ನಮ್, ಸಂಯೋಜಕಿ ಪ್ರೊ. ಎ. ಹನ್ಹಾ ರಚೆಲ್ ವಾಸಂತಿ, ಸದಸ್ಯೆ ಡಾ.ಸಂಧ್ಯಾ ನಾಯರ ಇನ್ನಿತರ ಮಾಹಿತಿಗಳನ್ನು ಪಾಲಕರಿಂದ ಮತ್ತು ಹಳೆಯ ವಿದ್ಯಾರ್ಥಿಗಳಿಂದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಮಂಜಗುಣಿ, ಖಜಾಂಚಿ ಸಿಮಿತಾ ನಾಯ್ಕ, ಹಳೆಯ ವಿದ್ಯಾರ್ಥಿಗಳಾದ ಗಣೇಶ ನಾಯ್ಕ, ಸಚಿನ ಜೆ. ನಾಯ್ಕ, ಪಲ್ಲವಿ ಶೆಟ್ಟಿ, ಭರತ ಗೌಡ, ಅಕ್ಷತಾ ಆರ್. ನಾಯರ, ಸವಿತಾ ಎಂ. ನಾಯ್ಕ, ಗಣೇಶ ಕಡೇಮನಿ, ಸಾಕ್ಷಿ ನಾಯಕ, ವಿನಾಯಕ ಎನ್. ವೆರ್ಣೇಕರ, ಸಚಿನ ಶೆಟ್ಟಿ, ಪಾಲಕರಾದ ವಾಸುದೇವ ನಾಯ್ಕ ಇತರರಿದ್ದರು.