• first
  second
  third
  Slide
  Slide
  previous arrow
  next arrow
 • ಕಾರ್ತೀಕ ಸೋಮವಾರದ ಭಜನಾ ಕಾರ್ಯಕ್ರಮ ಸಂಪನ್ನ

  300x250 AD

  ಶಿರಸಿ: ನಗರದ ಅಯ್ಯಪ್ಪ ದೇವಾಲಯದಲ್ಲಿ ಕಾರ್ತೀಕ ಸೋಮವಾರದಂದು ಪ್ರಜ್ವಲ ಟ್ರಸ್ಟ್ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

  ಶ್ರೀಮತಿ ಚೇತನಾ ಹೆಗಡೆ ಇವರ ಶಿಷ್ಯವೃಂದದವರು ಅತ್ಯಂತ ಭಕ್ತಿ ಪೂರ್ವಕ ಭಜನೆಗಳನ್ನು ಹಾಗೂ ಶಂಕರ ಸ್ತೋತ್ರಗಳನ್ನು ಹಾಡಿ ಸೇವೆ ಸಲ್ಲಿಸಿದರು. ನಂತರದಲ್ಲಿ ಸ್ನೇಹಾ ಉದಾಸಿ, ಶ್ರೀನಿಧಿ ಹೆಗಡೆ,ಬಿಂದು ಹೆಗಡೆ, ಸುಗಂಧಿ ಗುರುಪ್ರಸಾದ್ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇಳಿಹೊತ್ತು 6 ಗಂಟೆಯಿಂದ ಪ್ರಾರಂಭವಾದ ಭಜನಾ ಕಾರ್ಯಕ್ರಮವು ಮಹಾ ಮಂಗಳಾರತಿಯವರೆಗೆ ಸರಿಸುಮಾರು 3 ಗಂಟೆಗಳವರೆಗೆ ನಿರಂತರವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಬಲಾ ಸಾಥಿಯಾಗಿ ಸುಬ್ಬಣ್ಣ ಮಂಗ್ಳೂರ್, ಹಾರ್ಮೋನಿಯಂನಲ್ಲಿ ಕಮಲಾಕ್ಷಿ ಹೆಗಡೆ ಸಾಥ್ ನೀಡಿದರು.
  ಮಹಾ ಮಂಗಳಾರತಿಯ ನಂತರ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

  300x250 AD
  Share This
  300x250 AD
  300x250 AD
  300x250 AD
  Back to top