Slide
Slide
Slide
previous arrow
next arrow

ಉದ್ಯೋಗ ಅವಕಾಶಕ್ಕೆ ಗುಣಮಟ್ಟದ ಶಿಕ್ಷಣ ನಮ್ಮದಾಗಿದೆ: ಜಿ.ಎಂ.ಹೆಗಡೆ ಮುಳಖಂಡ

300x250 AD

ಶಿರಸಿ :  ಹಿಂದೊಂದು  ಕಾಲದಲ್ಲಿ ಉದ್ಯೋಗವನ್ನು ಅರಸಿಕೊಂಡು ಹೋಗುವ ಪರಿಸ್ಥಿತಿ ಇತ್ತು. ಆದರೆ ಇಂದು ಅದನ್ನು  ಕೌಶಲ್ಯದಿಂದ ಸಾಧಿಸಬಹುದು. ಈ ಸಂಸ್ಥೆಯಿಂದ ಹೋದ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿರುವುದು ಅಭಿಮಾನದ ಸಂಗತಿ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಂಇಎಸ್ ಸಂಸ್ಥೆಯ  ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ  ಹೇಳಿದರು.

  ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ, ಮಾತನಾಡಿ, ಮೊದಲಿನಿಂದಲೂ ನಮ್ಮ  ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಲಾಗುತ್ತಿದೆ. ಉತ್ತಮವಾದ ಕೊಡುಗೆಯನ್ನು ನೀಡಿದರೆ ಆ ಸಂಸ್ಥೆ ಬೆಳೆಯುತ್ತದೆ.   ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಉದ್ಯೋಗ ಅವಕಾಶಕ್ಕೆ ಬೇಕಾಗುವ ಕೌಶಲ್ಯಗಳನ್ನು ಒದಗಿಸುತ್ತಿದೆ ಎಂದರು.

  ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಲೇಜು ಉಪಸಮಿತಿ ಅಧ್ಯಕ್ಷ ಎಸ್ ಕೆ ಭಾಗ್ವತ್, ಎಲ್ಲಿ ಗುಣಮಟ್ಟದ ಶಿಕ್ಷಣ ಇರುತ್ತದೆಯೋ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತದೆ. ಕೌಶಲ್ಯ ಭರಿತ ವಿದ್ಯಾರ್ಥಿಗಳಿಗೆ ಉದ್ಯೋಗ ಅಂಗೈಯಲ್ಲಿನ ಬೆಣ್ಣೆಯಂತೆ. ಇಡೀ ಜಿಲ್ಲೆಯ ಜನರು ಈ ಉದ್ಯೋಗ ಮೇಳದ ಲಾಭವನ್ನು ಸದುಪಯೋಗಪಡಿಸಿಕೊಳ್ಳಲಿ ಎಂದರು.

300x250 AD

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಪ್ರಾಸ್ತಾವಿಕ ಮಾತನಾಡಿದರು. ಐಸಿಐಸಿಐ ಬ್ಯಾಂಕ್ ವಲಯ ನಿರ್ದೇಶಕ ಗೋಪಾಲಕೃಷ್ಣ ಗಡಿಗೆ ಉಪಸ್ಥಿತರಿದ್ದರು. ಪ್ರೊಫೆಸರ್ ಕೆ ಎನ್  ರೆಡ್ಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.ಜಿಲ್ಲೆಯ ಹೊರ ಜಿಲ್ಲೆಯ ಅನೇಕ  ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.

Share This
300x250 AD
300x250 AD
300x250 AD
Back to top