• Slide
  Slide
  Slide
  previous arrow
  next arrow
 • ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಸಂಪನ್ನ

  300x250 AD

  ಭಟ್ಕಳ: ಇಲ್ಲಿನ ಆಸರಕೇರಿಯ ಗುರುಮಠ ಶ್ರೀನಿಚ್ಚಲಮಕ್ಕಿ ತಿರುವಲ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀವೆಂಕಟೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಕಾರ್ತಿಕ ಮಾಸದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನರೆವೇರಿತು.
  ಮಂಗಲೋತ್ಸವದ ನಿಮಿತ್ತ ಹಮ್ಮಕೊಂಡ ಭಜನಾ ಕುಣಿತ ಸ್ಪರ್ಧೆಯಲ್ಲಿ ಬೆಣಂದೂರಿನ ಹಾರ್ಸಿಕಾನ ಯಕ್ಷ ದೇವತಾ ಭಜನಾ ತಂಡ ಪ್ರಥಮ ಬಹುಮಾನ ಪಡೆಯಿತು. ಬೆಳ್ನಿಯ ಶ್ರೀನಾಗಚೌಡೇಶ್ವರಿ ಮಹಿಳಾ ಭಜನಾ ತಂಡ ದ್ವಿತೀಯ ಸ್ಥಾನ, ಆಸರಕೇರಿಯ ಶ್ರೀವೆಂಕಟೇಶ್ವರ ಭಜನಾ ತಂಡ ತೃತೀಯ ಸ್ಥಾನ ಪಡೆಯಿತು. ಹಲ್ಲಾರಿ ಶ್ರೀಮಹಾಸತಿ ಭಜನಾ ತಂಡ ಹಾಗೂ ಬೆಂಗ್ರೆ ಮಾಲೇಕೊಡ್ಲು ಶ್ರೀಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಸಮಾಧಾನಕರ ಬಹುಮಾನ ಪಡೆದರು.
  ಬಹುಮಾನ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಬಹುಮಾನ ವಿತರಿಸಿ, ಇಂದು ಮಹಿಳೆಯರು ಎಲ್ಲಾ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ. ಭಜನಾ ಕುಣಿತ ಸ್ಪರ್ಧೆಯಲ್ಲೂ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಮಹಿಳೆಯರು ತಮ್ಮ ಮಕ್ಕಳಿಗೆ ಸಂಸ್ಕಾರದೊಂದಿಗೆ ಧಾರ್ಮಿಕತೆಯನ್ನು ಕಲಿಸಬೇಕಾದ ಜವಾಬ್ದಾರಿ ಇದೆ. ತಂದೆ- ತಾಯಿಗಳು ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ನಮ್ಮ ಧಾರ್ಮಿಕ ಸಂಕೇತವಾದ ಭಜನೆಯನ್ನು ಕಲಿಸಿಕೊಡಬೇಕು. ಈ ಮೂಲಕ ಭಜನೆಗಳು ಪ್ರತಿನಿತ್ಯ ನಮ್ಮ ನಮ್ಮ ಮನೆಗಳಲ್ಲಿ ಕೇಳುವಂತಾಗಬೇಕು ಎಂದರು.
  ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಶ್ರೀನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿದರು. ಶ್ರೀಧರ ನಾಯ್ಕ ಭಜನೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ನಾಯ್ಕ ಹಾಗೂ ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕುಣಿತ ಸ್ಪರ್ಧೆಯ ನಿರ್ಣಾಯಕರಾಗಿ ಸಮಾಜ ಸೇವಕ ಭಾಸ್ಕರ ನಾಯ್ಕ, ಗಂಗಾಧರ ನಾಯ್ಕ ಹಾಗೂ ನಾರಾಯಣ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ವೆಂಕಟೇಶ್ವರ ಯುವಕ ಸಂಘದ ಅಧ್ಯಕ್ಷ ವಸಂತ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top