• Slide
    Slide
    Slide
    previous arrow
    next arrow
  • ವಿದ್ಯಾನಿಧಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

    300x250 AD

    ಕಾರವಾರ: ಮೀನುಗಾರಿಕೆ ಇಲಾಖೆಯು 2022-23ನೇ ಸಾಲಿನ ಮೀನುಗಾರರ, ಮೀನು ಕೃಷಿಕರ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
    8ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಹೆಣ್ಣು ಮಕ್ಕಳಿಗೆ ಮಾತ್ರ ರೂ.2000, ಪಿಯುಸಿ, ಐಟಿಐ, ಡಿಪ್ಲೋಮಾ ಓದುತ್ತಿರುವ ಹೆಣ್ಣು ಮಕ್ಕಳಿಗೆ ರೂ.3000 ಮತ್ತು ಗಂಡು ಮಕ್ಕಳಿಗೆ ರೂ.2500, ಪದವಿ ಅಂದರೆ ಬಿ.ಎ, ಬಿಎಸ್.ಸಿ, ಬಿಕಾಂ ಹಾಗೂ ಸ್ನಾತಕೋತ್ತರ ಕೋರ್ಸ್ ಓದುವತ್ತಿರುವ ಹೆಣ್ಣು ಮಕ್ಕಳಿಗೆ ರೂ.5500 ಮತ್ತು ಗಂಡು ಮಕ್ಕಳಿಗೆ ರೂ.5000, ವೃತ್ತಿಪರ ಕೋರ್ಸ್ಗಳಾದ ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್, ಬಿ ಫಾರ್ಮ್, ನರ್ಸಿಂಗ್ ಓದುತ್ತಿರುವ ಗಂಡು ಮಕ್ಕಳಿಗೆ ರೂ.7500 ಮತ್ತು ಹೆಣ್ಣು ಮಕ್ಕಳಿಗೆ ರೂ.8000, ಎಂಬಿಬಿಎಸ್, ಬಿಇ, ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳನ್ನು ಓದುವ ಗಂಡು ಮಕ್ಕಳಿಗೆ ರೂ.10,000 ಮತ್ತು ಹೆಣ್ಣು ಮಕ್ಕಳಿಗೆ ರೂ.11000 ಶಿಷ್ಯವೇತನ ನೀಡಲಾಗುವುದು.
    ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲಿಚ್ಚಿಸುವ ಜಿಲ್ಲೆಯ ಎಲ್ಲಾ ಮೀನುಗಾರರು FRUITS ID ಸೃಜಿಸಲು ತಮ್ಮ ಆಧಾರ್ ಕಾರ್ಡ್ ಪ್ರತಿ, ಮೀನುಗಾರರ ಸಹಕಾರ ಸಂಘದ ಸದಸ್ಯತ್ವ ಪತ್ರ, ಬ್ಯಾಂಕ್ ಖಾತೆ ವಿವರ, ಮೊಬೈಲ್ ದೂರವಾಣಿ ಸಂಖ್ಯೆ, ಹಾಗೂ ತಮ್ಮ ಮಕ್ಕಳ ಶಾಲಾ ವಿದ್ಯಾಭ್ಯಾಸದ ಐಡಿ ಕಾರ್ಡ್ ಪ್ರತಿಯೊಂದಿಗೆ ಸಂಬ0ಧಿಸಿದ ತಾಲ್ಲೂಕು ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಿ ನ.30ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top