ದಾಂಡೇಲಿ: ಕರ್ನಾಟಕ ವಿಶ್ವವಿದ್ಯಾಲಯದಡಿಯಲ್ಲಿ ನಡೆದ 2021-22ನೇ ಸಾಲಿನ ವಾಣಿಜ್ಯ ವಿಭಾಗದ 6ನೇಯ ಸೆಮಿಸ್ಟರ್ ಫಲಿತಾಂಶ ಈಗಾಗಲೆ ಪ್ರಕಟಗೊಂಡಿದ್ದು, ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯ ಅಗ್ರ ಸಾಧನೆಯೊಂದಿಗೆ ನಗರಕ್ಕೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದೆ.
ವಿದ್ಯಾಲಯದ 52 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 52 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ: 100% ಫಲಿತಾಂಶವನ್ನು ತಂದುಕೊಟ್ಟಿದ್ದಾರೆ. ಇವರಲ್ಲಿ 48 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅಂಕಗಳೊAದಿಗೆ ಉತ್ತೀರ್ಣರಾಗಿದ್ದರೆ, ಉಳಿದ ನಾಲ್ವರು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿನಿ ಲಕ್ಷ್ಮಿ ಜೆ.ರಾಥೋಡ 7 ವಿಷಯಗಳ ಪೈಕಿ 5 ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಶೇ 97 ಅಂಕಗಳೊ0ದಿಗೆ ಕಾಲೇಜಿಗೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಯೋಗಿತಾ ವಿ.ಕಲಾಲ್ ಶೇ 95.57 ಅಂಕಗಳೊ0ದಿಗೆ ದ್ವಿತೀಯ ಮತ್ತು ಜೇಸಿಕಾ ವೈ.ಗೊಡಗು ಶೇ 95.28 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಪ್ರಿನ್ಸಿಪಲ್ ಆಫ್ ಫಾರೀನ್ ಎಕ್ಸ್ಚೇಂಜ್ ವಿಷಯದಲ್ಲಿ 11, ಮ್ಯಾನೇಜ್ಮೆಂಟ್ ಅಕೌಂಟಿ0ಗ್, ಕೊಸ್ಟ್ ಅಕೌಂಟಿ0ಗ್‌ನಲ್ಲಿ ತಲಾ ಐವರು, ಬ್ಯುಜಿನೆಸ್ ಲಾ ವಿಷಯದಲ್ಲಿ ಇಬ್ಬರು ಮತ್ತು ಕಂಪ್ಯೂಟರ್ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಕಾಲೇಜಿನ ಹಿರಿಮೆ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಅತ್ಯುತ್ತಮ ಫಲಿತಾಂಶವನ್ನು ತಂದುಕೊಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಜಿ.ಹೆಗಡೆ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಲಕ್ಷ್ಮಿ ಪರಬ್ ಹಾಗೂ ಉಪನ್ಯಾಸಕಿಯರಾದ ಪ್ರೊ.ಅಶಿತಾ ಸಲ್ಡಾನ, ಪ್ರೊ. ರಹಿಲಾ ಸನದಿ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿಗಳು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.