Slide
Slide
Slide
previous arrow
next arrow

ದಹಿಂಕಾಲ ಉತ್ಸವ: ಮೆರವಣಿಗೆಯಲ್ಲಿ ಗಮನ ಸೆಳೆದ ಹಲವು ರೂಪಕ

300x250 AD

ಅಂಕೋಲಾ: ಇಲ್ಲಿಯ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಈ ಪ್ರಯುಕ್ತ ಶ್ರೀ ಶಾಂತಾದುರ್ಗಾ ಶ್ರೀ ವೆಂಕಟರಮಣ ದೇವರ ದೀಪಾಲಂಕೃತ ರಥೋತ್ಸವವು ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಥ ಸಾಗುವ ಮುಖ್ಯ ಬೀದಿಗಳಲ್ಲಿ ತಳಿರು ತೋರಣ ಆಕರ್ಷಕ ಮಹಾದ್ವಾರ ಮತ್ತು ವಿದ್ಯುತ್ ದೀಪಾಲಂಕಾರ ನೆರೆದ ಸಾವಿರಾರು ಭಕ್ತರ ಮನಸೂರೆಗೊಂಡಿತು.
ಮೆರವಣಿಗೆಯಲ್ಲಿ ಹಲವಾರು ರೂಪಕ ಹಾಗೂ ಚಂಡೆ ವಾದನ ಸೇರಿದಂತೆ ವಿವಿಧ ವಾದ್ಯ ತಂಡಗಳು ಭಾಗವಹಿಸಿದ್ದವು. ರೂಪಕಗಳಲ್ಲಿ ಮಹಿಳೆಯರ ನವಿಲು ನೃತ್ಯ ದೃಶ್ಯ ರೂಪಕ, ಸಿನೆಮಾ ರಂಗದಲ್ಲಿ ದಾಖಲೆ ಸೃಷ್ಟಿಸಿದ ಕಾಂತಾರಾ ಸಿನೆಮಾದ ದೃಶ್ಯ ರೂಪಕ, ಸಾಯಿ ಮಹಿಳಾ ಮತ್ತು ಪುರುಷರ ತಂಡದ ಚಂಡೆವಾದನ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರ, ತಿರುಪತಿ ವೆಂಕಟರಮಣ ದೇವರ ಸ್ತಬ್ಧಚಿತ್ರಗಳು, ಹುಲಿ ಮತ್ತು ಕರಡಿ ರೂಪಕ, ಬೇಡರ ಕಣ್ಣಪ್ಪ ಹೀಗೆ ಅನೇಕ ರೂಪಕಗಳು ಹಾಲಕ್ಕಿ ಗುಮಟೆ ವಾದನ, ಮರಕಾಲು ಕುಣಿತ ಮೆರವಣಿಗೆ ಯುದ್ದಕ್ಕೂ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಶಾಶಕಿ ರೂಪಾಲಿ ನಾಯ್ಕ ಮತ್ತು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಶಾಸಕ ಸತೀಶ ಸೈಲ್, ಜಿಲ್ಲಾ ಆರ್ಯ ಈಡೀಗ ನಾಮಧಾರಿ ಸಂಘದ ಅದ್ಯಕ್ಷ ಮಂಜುನಾಥ ನಾಯ್ಕ, ತಾಲೂಕಾಧ್ಯಕ್ಷ ಎಂ.ಪಿ.ನಾಯ್ಕ, ದೈಹಿಂಕಾಲ ಉತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ, ನಾಗೇಶ ನಾಯ್ಕ ಸೇರಿದಂತೆ ಹಲವರು ಇದ್ದರು.

300x250 AD
Share This
300x250 AD
300x250 AD
300x250 AD
Back to top