• Slide
    Slide
    Slide
    previous arrow
    next arrow
  • ಅಕ್ರಮವಾಗಿ ದನಗಳ ಸಾಗಾಟ: ಓರ್ವನ ಬಂಧನ, ಇನ್ನಿಬ್ಬರು ಪರಾರಿ

    300x250 AD

    ಅಂಕೋಲಾಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಟಾಟಾ ಏಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 4 ದನಗಳನ್ನು ಅಂಕೋಲಾ ಪೊಲೀಸರು ತಾಲೂಕಿನ ಮೊಗಟಾ ಹೈಸ್ಕೂಲ್ ಬಳಿ ದಾಳಿ ನಡೆಸಿ ರಕ್ಷಣೆ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಇಬ್ಬರು ಓಡಿಹೋಗಿದ್ದಾರೆ. 

    ಕಲಘಟಗಿ ದೇವಿಕೊಪ್ಪ ನಿವಾಸಿ ಚನ್ನಬಸು ನಾಗಪ್ಪ ಬಿಚ್ಚುಗತ್ತಿ (33) ಬಂಧಿತ ಆರೋಪಿಯಾಗಿದ್ದು ಪಕೀರೇಶ ಕಳಸೂರು ಮತ್ತು ಯಮುನಪ್ಪ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

    300x250 AD

    ಆರೋಪಿತರು ಕಲಘಟಗಿಯಿಂದ ಹಿಲ್ಲೂರು ಮಾರ್ಗವಾಗಿ ದನಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಮೊಗಟಾ ಹೈಸ್ಕೂಲ್ ಬಳಿ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಸುಮಾರು 39 ಸಾವಿರ ಮೌಲ್ಯದ 4 ದನಗಳನ್ನು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.  ಆರೋಪಿತರು ಹಿಂಸಾತ್ಮಕ ರೀತಿಯಲ್ಲಿ ದನಗಳನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿ ನಾಪತ್ತೆ ಆಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top