ಕಾರವಾರ: ಡಾ.ರಾಜಕುಮಾರ್ ಅಭಿಮಾನಿ ಬಳಗ, ಕಾರವಾರ ಇದರ ವತಿಯಿಂದ ಎಂಟನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.20ರಂದು ಸಂಜೆ 5.30ರಿಂದ ನಗರದ ಡೈವಿನ್ ಹೋಟೆಲ್ ಹಿಂಭಾಗದ ಫುಡ್‌ಕೋರ್ಟ್ ಬಳಿ ನಡೆಯಲಿದೆ.
ಕನ್ನಡಾಂಬೆಗೆ ಪುಷ್ಪನಮನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ್ ಕೆ.ಸಿ., ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಬಾಡ ಶಿವಾಜಿ ಬಿಎಡ್ ಕಾಲೇಜಿನ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ದಿ.ಪುನಿತ್ ಸ್ಮರಣಾರ್ಥ ಸರಕಾರಿ ಶಾಲೆಯ ಆಯ್ದ ಬಡ ಮಕ್ಕಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಎಮ್‌ಎಮ್‌ಸಿಎಲ್ ಸಹಕಾರದೊಂದಿಗೆ ಶಾಲಾ ಬ್ಯಾಗ್ ಮತ್ತು ಕೊಡೆ ವಿತರಣೆ ನಡೆಯಲಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರೇಕ್ಷಕರಿಗೆ ಉತ್ತರ ಕನ್ನಡ ಮತ್ತು ಕರ್ನಾಟಕದ ಕುರಿತಾಗಿ ಕನ್ನಡ ರಸಪ್ರಶ್ನೆ ಮತ್ತು ಸ್ಥಳದಲ್ಲೇ ಬಹುಮಾನ ಕೊಡುವ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ನಿಮಿತ್ತ ಕನ್ನಡ ಗೀತ ಗಾಯನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಜಕುಮಾರ್ ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.
ಡಾ.ರಾಜಕುಮಾರ್ ಅಭಿಮಾನಿ ಬಳಗದಿಂದ ಎಂಟನೇ ವರ್ಷದ ಕನ್ನಡ ರಾಜ್ಯೋತ್ಸವ
![](https://euttarakannada.in/wp-content/uploads/2021/08/euk-logo-1-640x438.jpg?v=1628473623)