• Slide
    Slide
    Slide
    previous arrow
    next arrow
  • ರೈತರು ಸಹಕಾರಿ ಸಂಘಗಳ ಮೂಲಕವೇ ವ್ಯವಹರಿಸುವಂತೆ ಡಾ.ನಿರಂಜನ್ ವಾನಳ್ಳಿ ಮನವಿ

    300x250 AD

    ಶಿರಸಿ: ಸಹಕಾರ ಸಪ್ತಾಹದ ಅಂಗವಾಗಿ ಗುರುವಾರ ನಗರದ ಟಿಎಂಎಸ್ ಸಂಸ್ಥೆಯಿಂದ ಏರ್ಪಡಿಸಿದ್ದ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ ವಾನಳ್ಳಿ ಪಾಲ್ಗೊಂಡು ಸಭೆಯನ್ನುದ್ದೇಶಿಸಿ ಮಾತನಾಡಿದರು. ನಗರದ ವಲಸೆಯ ಕಾರಣದಿಂದ ಮಲೆನಾಡಿನ ಕುಟುಂಬದಲ್ಲಿ ಕೃಷಿ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಕೃಷಿ ನಿರ್ವಹಣೆ ಅಸಾಧ್ಯ ಎಂದು ಯಾವುದೇ ಕಾರಣಕ್ಕೂ ಕೃಷಿ ತೋಟ ಜಮೀನನ್ನು ಯಾರ‍್ಯಾರಿಗೋ ಮಾರಾಟ ಮಾಡುವುದಕ್ಕೆ ಮಾತ್ರ ಮುಂದಾಗಬಾರದು ಎಂದು ಮನವಿ ಮಾಡಿದರು.
    ಎಲ್ಲರೂ ಉದ್ಯೋಗಕ್ಕೆ ಬೇರೆಡೆ ನೆಲೆಸಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಹುತೇಕ ಹಿರಿಯರಷ್ಟೇ ಇದ್ದಾರೆ. ಹೀಗಾಗಿ ಮುಂದೇನು ಎಂಬ ಪ್ರಶ್ನೆ ಎದ್ದಿದೆ. ಮಲೆನಾಡಿನ ಯುವಕರು ಈ ಕೃಷಿ ತೋಟ ಜಮೀನನ್ನು ಯಾವ್ಯಾವುದೋ ರಾಜ್ಯದವರಿಗೆಲ್ಲ ಮಾರಾಟ ಮಾಡಲು ಮುಂದಾಗಬಾರದು. ಇದನ್ನು ಉಳಿಸಿಕೊಂಡು ಹೋಗಬೇಕು ಎಂದರು. ಈ ಭಾಗದಲ್ಲಿ ಸಹಕಾರಿ ಸಂಘಗಳು ಪ್ರಬಲವಾಗಿ ಬೆಳೆದಿವೆ. ಭವಿಷ್ಯದಲ್ಲಿ ರೈತರ ಕೃಷಿ ಜಮೀನುಗಳನ್ನು ಸಹಕಾರಿ ಸಂಸ್ಥೆಗಳೇ ನೋಡಿಕೊಡುವ ಪ್ರಸಂಗವೂ ಬರಬಹುದು ಎಂದರು.
    ಕಾರ್ಯಕ್ರಮ ಉದ್ಘಾಟಿಸಿದ ಕ್ಯಾಂಪ್ಕೊ ಅಧ್ಯಕ್ಷ ಎ ಕಿಶೋರಕುಮಾರ ಕೊಡ್ಗಿ ಮಾತನಾಡಿ, ಈ ಭಾಗದ ಸಹಕಾರ ಚಳುವಳಿ ರಾಜ್ಯದಲ್ಲೇ ಮಾದರಿಯಾಗಿದೆ. ಇಲ್ಲಿನ ಸಂಘಗಳು ಸಾಲ, ಬಡ್ಡಿ ವಸೂಲಿಗಷ್ಟೇ ಸೀಮಿತವಾಗದೇ ಪ್ರತಿಯೊಬ್ಬರ ಬದುಕಿನ ಬದಲಾವಣೆಗೆ ಚಿಂತನೆ ನಡೆಸಿ ಹೆಜ್ಜೆ ಇಟ್ಟಿವೆ ಎಂದರು.
    ಅಡಕೆಗೆ ಈಗ ಒಳ್ಳೆಯ ದರವಿದೆ. ಅಡಕೆಗೆ ಸ್ಥಿರ ದರ ಇರಲು ಕ್ಯಾಂಪ್ಕೊ ಸಂಸ್ಥೆ ನಿರಂತರ ಪ್ರಯತ್ನಿಸುತ್ತಿದೆ. ಉತ್ಪಾದನೆಯ ಅಡಕೆಯಲ್ಲಿ ಶೇ.15 ರಷ್ಟು ಅಡಕೆಯನ್ನು ಸಹಕಾರಿ ಸಂಘಗಳು ಖರೀದಿಸುತ್ತಿವೆ. ಇನ್ನುಳಿದ ಶೇ. 85 ರಷ್ಟನ್ನು ಖಾಸಗಿಯಲ್ಲಿ ಮಾರಾಟವಾಗುತ್ತಿವೆ. ಸಹಕಾರಿ ಸಂಘಗಳು ಸರಕಾರಕ್ಕೆ ನೂರಕ್ಕೆ ನೂರರಷ್ಟು ತೆರಿಗೆ ನೀಡುತ್ತಿದ್ದೇವೆ. ಕ್ಯಾಂಪ್ಕೊ ಸಮಸ್ಥೆ 500 ಕೋಟಿ ರೂ.ಜಿಎಸ್‌ಟಿನೀಡಿದೆ. ಹೀಗಾಗಿ ರೈತರು ಸಹಕಾರಿ ಸಂಘಗಳ ಮೂಲಕವೇ ವ್ಯವಹರಿಸಬೇಕು ಎಂದು ಮನವಿ ಮಾಡಿದರು.
    ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಉಪಾಧ್ಯಕ್ಷ ಎಂ.ಪಿ.ಹೆಗಡೆ ಹೊನ್ನೆಕಟ್ಟಾ, ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟಿಸರ, ವಿ.ಆರ್.ಹೆಗಡೆ ಮಣ್ಮನೆ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ, ಉಪನಿಬಂಧಕ ಆರ್.ಮಂಜುನಾಥ, ಮುಖ್ಯ ಕಾರ್ಯನಿರ್ವಾಹಕ ಎಂ.ಎ,ಹೆಗಡೆ ಉಪಸ್ಥಿತರಿದ್ದರು.

    ಸರಕಾರದ ನೀತಿ ಪೂರಕವಾಗಿಲ್ಲ:
    ಸರಕಾರದ ನೀತಿಗಳು ಸಹಕಾರಿ ಸಂಘಗಳಿಗೆ ಪೂರಕವಾಗಿಲ್ಲ. ಉತ್ತರಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಶೇ.1.5ರಷ್ಟು ಮಂಡಿ ಟ್ಯಾಕ್ಸ್ ವಿಧಿಸುತ್ತಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರಿಗೆ ಮನವಿ ಮಾಡಿದ್ದೇವೆ. ಮಂಡಿ ಟ್ಯಾಕ್ಸ್ ಹಿಂಪಡೆಯಲು ಒತ್ತಾಯಿಸಿದ್ದೇವೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ ಕಿಶೋರಕುಮಾರ ಕೊಡ್ಗಿ ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top