ಶಿರಸಿ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರದಂದು ತಾಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ವಿದ್ಯುತ್ ಅದಾಲತ್ ನಡೆಸುವ ಮೂಲಕ ಸ್ಥಳದಲ್ಲಿಯೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲು ಸರ್ಕಾರವು ಆದೇಶೀಸಿರುವ ಪ್ರಯುಕ್ತ ನ.19 ರಂದು ಬೆಳಿಗ್ಗೆ 11 ಘಂಟೆಗೆ ಶಿರಸಿ ಉಪವಿಭಾಗದ ಗ್ರಾಮೀಣ-2 ಶಾಖೆಯ ಬೆಟ್ಟಕೊಪ್ಪ, ಹುಲೇಕಲ್ ಶಾಖೆಯ ಧೋರಣಗೇರಿ ಹಾಗೂ ಬನವಾಸಿ ಶಾಖೆಯ ಹುಸರಿ ಹಾಗೂ ಬರೂರು ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಂಡಿದ್ದು, ಗ್ರಾಹಕರು ಸಭೆಯಲ್ಲಿ ಭಾಗವಹಿಸಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.
ನ. 19ಕ್ಕೆ ವಿದ್ಯುತ್ ಅದಾಲತ್
![](https://euttarakannada.in/wp-content/uploads/2021/08/euk-logo-1-640x438.jpg?v=1628473623)