• Slide
  Slide
  Slide
  previous arrow
  next arrow
 • ಚಿತ್ರಕಲೆ: ರಾಜ್ಯಮಟ್ಟಕ್ಕೆ ರಮ್ಯಾ ನಾಯ್ಕ

  300x250 AD

  ಹೊನ್ನಾವರ: ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ಹೊದ್ಕೆ ಶಿರೂರು ಪ್ರೌಢಶಾಲೆಯ ವಿದ್ಯಾರ್ಥಿನಿ ರಮ್ಯಾ ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಆಶ್ರಯದಲ್ಲಿ ನ.14ರಂದು ನಡೆದ 2022-23ನೇ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.
  ಪ್ರೌಢಶಾಲಾ ವಿದ್ಯಾರ್ಥಿಗಳ ಈ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಕು.ರಮ್ಯಾ ಗಿರೀಶ್ ನಾಯ್ಕ ಇವಳು ತನ್ನ ಕಲೆಯನ್ನು ಅನಾವರಣಗೊಳಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕು.ರಮ್ಯಾ ಇವಳು, ಮೂಲತಃ ಕಡ್ನೀರಿನವಳಾಗಿದ್ದು, ಹೊದ್ಕೆಶಿರೂರು ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಚಿತ್ರಕಲಾ ಶಿಕ್ಷಕರಾದ ಎಂ.ಎಸ್.ಗಡವಾಲೆ ಅವರು ತರಬೇತಿ ನೀಡಿದ್ದರು.
  ಓದಿನ ಜೊತೆಗೆ ಕಲೆ, ಸಾಹಿತ್ಯ, ಚಿತ್ರಕಲೆ ಸೇರಿ ವಿವಿಧ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂಬ ಆಸೆ ಹೊಂದಿರುವ ರಮ್ಯಾ ಕನಸುಗಳು ಈಡೇರಲಿ, ಜೊತೆಗೆ ಇನ್ನಷ್ಟು ಸಾಧನೆಗೈಯ್ಯಲಿ. ಇವರ ಈ ಸಾಧನೆಗೆ ಮುಖ್ಯಾಧ್ಯಾಪಕರಾದ ವಿ.ಜಿ.ಅವಧಾನಿ, ಶಿಕ್ಷಕ ಬಳಗ, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕರು, ಕಡ್ನೀರು, ಹೊದ್ಕೆ ಶಿರೂರು ಭಾಗದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top