ಕಾರವಾರ: ಇತ್ತಿಚೇಗೆ ಗೋವಾ ರಾಜ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ `ವಾಡೊ ಶಿನ್ ನ್ಯಾಷನಲ್ ಲೆವೆಲ್ ಕರಾಟೆ ಸ್ಪರ್ಧೆಯಲ್ಲಿ ನಗರದ ಬಾಲ ಮಂದಿರ ಶಾಲೆಯ ಕರಾಟೆ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿದಂತೆ ಉತ್ತರಪ್ರದೇಶ, ಬಿಹಾರ್, ಗೋವಾ ಹಾಗೂ ಅನೇಕ ರಾಜ್ಯಗಳ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಗರದ ಬಾಲಮಂದಿರ ಫ್ರೌಢಶಾಲೆಯ ಕರಾಟೆ ವಿದ್ಯಾರ್ಥಿಗಳು ಏಳು ಚಿನ್ನ, ಎರಡು ಬೆಳ್ಳಿ, ಹಾಗೂ ಐದು ಕಂಚಿನ ಪದಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ಲೋಹಿತ್ ಮಡಿವಾಳ, ಗಣೇಶ ಗುನಗಿ ಕಟಾ ಮತ್ತು ಕುಮಿತೆಯಲ್ಲಿ ಚಿನ್ನ, ಕೃಷ್ಣವೇನಿ ದೇಮಟ್ಟಿ ಹಾಗೂ ರಿಷಿಕಾ ಗೌಡ ಕಟಾದಲ್ಲಿ ಚಿನ್ನ ಹಾಗೂ ಕುಮಿತೆಯಲ್ಲಿ ಕಂಚು, ಮಲ್ಲಿಕಾರ್ಜುನ ದೇಮಟ್ಟಿ ಕಟಾದಲ್ಲಿ ಬೆಳ್ಳಿ, ಕುಮಿತೆಯಲ್ಲಿ ಕಂಚು, ಆಯುಷ್ ನಾಯಕ ಕಟಾದಲ್ಲಿ ಚಿನ್ನ ಹಾಗೂ ಕುಮಿತೆಯಲ್ಲಿ ಬೆಳ್ಳಿ, ಪ್ರೀತಮ್ ಪಟಗಾರ್ ಕಟಾ ಹಾಗೂ ಕುಮಟೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಬಾಲಮಂದಿರದ ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶಾಲೆಯ ಆಡಳಿತಾಧಿಕಾರಿ ಜಿ.ಪಿ.ಕಾಮತ, ಪ್ರಾಂಶುಪಾಲರಾದ ಅಂಜಲಿ ಮಾನೆ ಸಂತಸ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಸಾಧನೆಗೆ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕರಾಟೆ ಶಿಕ್ಷಕ ಪ್ರದೀಪ್ ಬಾಂದೇಕರ ಅವರ ಪರಿಶ್ರಮವನ್ನು ಪ್ರಶಂಸಿದ್ದಾರೆ.