ಶಿರಸಿ: ಸ್ಕೊಡ್‌ವೆಸ್ ಸಂಸ್ಥೆ, ಶಿರಸಿ ಹಾಗೂ ಕ್ವೆಸ್ಟ್ ಅಲಯನ್ಸ್ ಇವರ ಸಹಯೋಗದಲ್ಲಿ ಶಿರಸಿ ತಾಲೂಕಿನಲ್ಲಿ ಉಚಿತ ಕೌಶಲ್ಯ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಈ ತರಬೇತಿಯಲ್ಲಿ 21ನೇ ಶತಮಾನದ ಕೌಶಲ್ಯಗಳಾದ Basic and advanced ಇಂಗ್ಲಿಷ್ ಶಿಕ್ಷಣ, Al ಶಿಕ್ಷಣ, ವ್ಯಾಪಾರ ಮತ್ತು ಗ್ರಾಹಕರ ಸಂವಹನ ಕೌಶಲ್ಯ, ಸ್ವ ಉದ್ಯೋಗ ಕುರಿತು ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಮತ್ತು ಮುಂತಾದ ಹಲವು ವಿಷಯದ ಕುರಿತು 2 ತಿಂಗಳ ಉಚಿತ ತರಬೇತಿ ನೀಡಲಿದೆ. ಈ ತರಬೇತಿಯು ಯುವಕ/ ಯುವತಿಯರಿಗೆ ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ. 18 ವರ್ಷ ಮೇಲ್ಪಟ್ಟ 35 ವರ್ಷ ಕೆಳಗಿನ ಹಾಗೂ ಹತ್ತನೇ ತರಗತಿ/ಪಿಯುಸಿ/ ಪದವಿ ಆಗಿರುವ ಆಸಕ್ತ ಅಭ್ಯರ್ಥಿಗಳು ನೊಂದಣಿ ಮಾಡಿಕೊಳ್ಳಬಹುದು. ನೋಂದಣಿ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಮತ್ತು ಪ್ರವೇಶಕ್ಕಾಗಿ ಸೊಡ್‌ವೆಸ್ ಸಂಸ್ಥೆ, ಸಾಯಿ ಬಿಲ್ಡಿಂಗ್, ಮರಾಠಿಕೊಪ್ಪ, ಶಿರಸಿ ಮೊಬೈಲ್ ಸಂಖ್ಯೆ:Tel:+919110863425, Tel:+919900195285 ಸಂಪರ್ಕಿಸಲು ಕೋರಿದೆ. ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ನೋಂದಣಿ ಕೊನೆಯ ದಿನಾಂಕ: 12.05.2025.
ಸ್ಕೋಡ್‌ವೇಸ್‌ನಿಂದ ಉಚಿತ ಕೌಶಲ್ಯ ತರಬೇತಿ
