ಭಟ್ಕಳ: ಜಿಲ್ಲಾ ಗ್ರಾಮ ಸಹಾಯಕರ ಸಂಘದಿAದ ಬುಧವಾರದಂದು ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರನ್ನು ಭೇಟಿ ಮಾಡಿ ಗ್ರಾಮ ಸಹಾಯಕರ ಗ್ರೂಪ್ ಇನ್ಶುರೆನ್ಸ್ ಮಾಡುವ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಾಸ್ತಯ್ಯ ನಾಯ್ಕ, ಗೌರವಾಧ್ಯಕ್ಷ ರಾಮಕೃಷ್ಣ ನಾಯಕ, ಪ್ರಧಾನ ಕಾರ್ಯದರ್ಶಿ ರೋಹಿದಾಸ ನಾಯಕ, ಉಪಾಧ್ಯಕ್ಷೆ ರೇಷ್ಮಾ ಪರ್ನಾಂಡಿಸ್, ನಾಗೇಶ ನಾಯಕ ಕಾರವಾರ, ಭಟ್ಕಳ ತಾಲ್ಲೂಕು ಗ್ರಾಮ ಸಹಾಯಕ ವಾಸು ಶೆಟ್ಟಿ ಹಾಗೂ ಕಾರವಾರ ತಾಲ್ಲೂಕಿನ ಗ್ರಾಮ ಸಹಾಯಕರು ಹಾಜರಿದ್ದರು.
ಜಿಲ್ಲಾ ಗ್ರಾಮ ಸಹಾಯಕರ ಸಂಘದಿಂದ ನೂತನ ಜಿಲ್ಲಾಧಿಕಾರಿಗೆ ಅಭಿನಂದನೆ
