Slide
Slide
Slide
previous arrow
next arrow

ಚುನಾವಣೆಗೆ ಮಾತ್ರ ರಾಜಕೀಯ ಸೀಮಿತವಾಗಲಿ: ರತ್ನಾಕರ ನಾಯ್ಕ

300x250 AD

ಕುಮಟಾ: ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಇರಬೇಕೆ ಹೊರತು ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಾಗ ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಬೇಕೆಂದು ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಹೇಳಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ನಡೆಯುತ್ತಿರುವ ಕುಮಟಾ ವೈಭವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕುಮಟಾ ವೈಭವದಂತಹ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಷ್ಟದ ಕಾರ್ಯ. ಇಂಥ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುವ ಮಂಜುನಾಥ ಅವರಿಗೆ ಕುಮಟಾ ಜನತೆ ಸಹಕಾರ ನೀಡಬೇಕು. ರಾಜಕಾರಣಿಗಳು, ಜನಪ್ರತಿನಿಧಿಗಳು ತಮ್ಮ ಪಕ್ಷದ ರಾಜಕಾರಣದವನ್ನು ಬದಿಗಿಟ್ಟು, ಸಾಂಸ್ಕೃತಿಕ ಸೇವೆ ಗೈಯ್ಯುತ್ತಿರುವ ತಾಂಡವ ಕಲಾನಿಕೇತನ ಸಂಸ್ಥೆಯ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ಇನ್ನೋರ್ವ ಅತಿಥಿ ಕುಮಟಾ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭುವನ ಭಾಗ್ವತ್ ಮಾತನಾಡಿ, ಮಂಜುನಾಥ ನಾಯ್ಕ ನೇತೃತ್ವದಲ್ಲಿ ನಡೆಯುತ್ತಿರುವ ಕುಮಟಾ ವೈಭವದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ. ಕಲಾವಿದರನ್ನು ಪ್ರೋತ್ಸಾಹಿಸುವ ಜೊತೆಗೆ ಸಾಧಕರನ್ನು ಸನ್ಮಾನಿಸುವ ಮೂಲಕ ಅವರಿಗೆಲ್ಲ ಇನ್ನಷ್ಟು ಪ್ರೇರಣೆ ಒದಗಿಸಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕುಮಟಾ ಪುರಸಭೆ ಚೇರಮೆನ್ ಶುಶೀಲಾ ಗೋವಿಂದ ನಾಯ್ಕ ಮತ್ತು ಹೊನ್ನಾವರ ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತಾ ಮಾತನಾಡಿ, ತಾಂಡವ ಕಲಾನಿಕೇತನ ಸಂಸ್ಥೆಯ ಕಲಾ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾಕಾರ ಮನೋಜ ಗುನಗಾ ಅವರನ್ನು ಸನ್ಮಾನಿಸಲಾಯಿತು. ಮನೋಜ್ ಅವರು ಚಿತ್ರಿಸಿದ ತಾಂಡವ ಕಲಾನಿಕೇತನ ಸಂಸ್ಥೆ ಅಧ್ಯಕ್ಷ ಮಂಜುನಾಥ ನಾಯ್ಕ ಅವರ ಚಿತ್ರವನ್ನು ಮಂಜು ಅವರಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಪಲ್ಲವಿ ಮಡಿವಾಳ, ಆಶಾ ನಾಯ್ಕ, ಕುಮಟಾ ವೈಭವ ಸಮಿತಿ ಅಧ್ಯಕ್ಷ ನಾಗೇಶ ನಾಯ್ಕ, ಪ್ರಮುಖರಾದ ಮಹಾಬಲೇಶ್ವರ ನಾಯ್ಕ, ಗಣಪತಿ ಎನ್ ನಾಯ್ಕ, ಪತ್ರಕರ್ತ ರವಿ ಗಾವಡಿ, ನರಸಿಂಹ ಭಟ್, ಪವನ ಗುನಗಾ, ಗಣೇಶ ನಾಯ್ಕ, ಗಣಪತಿ ನಾಯ್ಕ, ಜಯಾ ಶೇಟ್ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಮಂಜುನಾಥ ನಾಯ್ಕ ಪ್ರಾಸ್ತಾವಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ಮತ್ತು ಬಿಂಧು ಅವದಾನಿ ನಿರೂಪಿಸಿದರು.

ಕುಣಿದು ಕುಪ್ಪಳಿಸಿದ ಜನತೆ
ಬಳಿಕ ನಡೆದ ಕನ್ನಡದ ಕೋಗಿಲೆ ತಂಡದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಗಾಯಕರಾದ ಸಂದೇಶ ನೀರಮಾರ್ಗ, ದಿವ್ಯಾ ರಾಮಚಂದ್ರ ಅವರ ಕಂಠ ಸಿರಿಯಿಂದ ಮೂಡಿದ ಬಂದ ಸುಮಧುರ ಗೀತೆಗಳು ಪ್ರೇಕ್ಷಕರ ಮನ ಮುಟ್ಟಿದ್ದವು. ಮನ ಸೆಳೆದ ಹಾಡುಗಳಿಗೆ ಯುವಕರು ಕುಣಿದು ಕುಪ್ಪಳಿಸುವ ಜೊತೆಗೆ ಚಪ್ಪಾಳೆ, ಶಿಳ್ಳೆಗಳ ಸುರಿಮಳೆ ಗೈದರು.

300x250 AD
Share This
300x250 AD
300x250 AD
300x250 AD
Back to top