ಅಂಕೋಲಾ: ನ.18, 19ರಂದು ನಡೆಯಲಿರುವ ನಾಮಧಾರಿ ದಹಿಂಕಾಲ ಉತ್ಸವದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು. ಶ್ರೀವೆಂಕಟರಮಣ ದೇವಸ್ಥಾನದಿಂದ ಆರಂಭವಾದ ಬೈಕ್ ರ‍್ಯಾಲಿಯು ಪಟ್ಟಣದ ಪ್ರಮುಖ ರಸ್ತೆ ಮತ್ತು ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸಂಚರಿಸಿ ಶಾಂತಾದುರ್ಗಾ ದೇವಸ್ಥಾನಕ್ಕೆ ಆಗಮಿಸುವ ಮೂಲಕ್ಕೆ ಸಂಪನ್ನಗೊಂಡಿತು.
ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಮಾತನಾಡಿ, ವರ್ಷದಿಂದ ವರ್ಷಕ್ಕೆ ನಾಮಧಾರಿ ದಹಿಂಕಾಲ ಉತ್ಸವವನ್ನು ಆಚರಿಸುತ್ತ ಬಂದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಲಾತಂಡಗಳು ಆಗಮಿಸಲಿವೆ. ಈ ವರ್ಷದಿಂದ ಬೈಕ್ ರ‍್ಯಾಲಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದರು.
ನಾಮಧಾರಿ ದಹಿಂಕಾಲ ಉತ್ಸವ ಸಮಿತಿ ಅಧ್ಯಕ್ಷ ನಾಗೇಂದ್ರ ನಾಯ್ಕ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಗೌರವಾಧ್ಯಕ್ಷ ಜಟ್ಟಿ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಮಿತಿಯ ಪ್ರಮುಖರಾದ ವಿನಾಯಕ ನಾಯ್ಕ, ಮಂಜುನಾಥ ನಾಯ್ಕ, ಉಮೇಶ ನಾಯ್ಕ, ಮಂಜುನಾಥ ಕೆ. ನಾಯ್ಕ, ಕೃಷ್ಣಾ ನಾಯ್ಕ, ಗಜು ನಾಯ್ಕ, ಗೋವಿಂದ್ರಾಯ ನಾಯ್ಕ, ಪ್ರಶಾಂತ ನಾಯ್ಕ, ಪಾಂಡು ನಾಯ್ಕ, ಅನಿಲ ನಾಯ್ಕ, ಉದಯ ನಾಯ್ಕ, ನಾಗರಾಜ ನಾಯ್ಕ, ಸಾಗರ ನಾಯ್ಕ ಮೋಹನ ನಾಯ್ಕ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.