• Slide
    Slide
    Slide
    previous arrow
    next arrow
  • ತಂದೆಯ ಜೊತೆಯೇ ಮಸಣ ಸೇರಿದ ಮಗ: ಕುಸಿದುಬಿದ್ದ ಮನೆಯ ಆಧಾರಸ್ಥಂಭ

    300x250 AD

    ಅಂಕೋಲಾ : ತಾಲೂಕಿನ ಬೇಳಾಬಂದರಿನಲ್ಲಿ ತಂದೆ ನಿಧನರಾಗಿ, ಅವರ ಅಂತ್ಯ ಸಂಸ್ಕಾರ ನಡೆಸಿದ ಕೆಲವೇ ಘಂಟೆಗಳಲ್ಲಿ , ಮಗನೂ ಮಸಣ ಸೇರುವಂತಹ ಮನಕಲುಕುವ ಘಟನೆ ನಡೆದಿದೆ. ಬೇಳಾಬಂದರ ನಿವಾಸಿ ವೆಂಕಟೇಶ ಥಾಕು ಬಂಟ ವಯೋಸಹಜ ಕಾಯಿಲೆಯಿಂದ ಬುಧವಾರ ತೀರಿಕೊಂಡಿದ್ದರು. ಅವರ ಅಂತ್ಯಕ್ರಿಯೆ ನಡೆಸಿದ ಕೆಲವೇ ಗಂಟೆಯಲ್ಲಿ ಮೃತರ ಮಗ ಮಂಜುನಾಥ ವೆಂಕಟೇಶ ಬಂಟ(33) ಈತನೂ ಸಹ ಮರಣ ಹೊಂದುವ ಮೂಲಕ ತಂದೆಯ ಬೆನ್ನಿಗೆ ಇಹಲೋಕ ತ್ಯಜಿಸಿದ್ದಾನೆ.

    ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮಗ ಮಂಜುನಾಥನನ ಡಯಾಲಿಸಿಸ್ ಮತ್ತಿತರ ಚಿಕಿತ್ಸೆ ಹಾಗೂ ಉಪಚಾರಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತ ವೃದ್ಧಾಪ್ಯ ಹಾಗೂ ಅನಾರೋಗ್ಯವನ್ನು ಲೆಕ್ಕಿಸದ ತಂದೆ, ಕೊನೆಗೂ ಕಾಲನ ಕರೆಗೆ ಓಗೊಟ್ಟು ದೈವಪಾದ ಸೇರಿದರೆ,ತಂದೆಯ ಪ್ರೀತಿ ಹಾಗೂ ಸೇವೆಯಿಂದಲೇ ಇಷ್ಟು ದಿನ ಜೀವಂತವಾಗಿದ್ದೇನೋ ಏನೋ ಎಂಬಂತೆ ಇದ್ದ ಮಗ ಮಂಜುನಾಥ್ ತಂದೆ ವೆಂಕಟೇಶನ ಸಾವಿನ ನೋವು ಅರಗಿಸಿಕೊಳ್ಳಲಾಗದೆ ತಂದೆಯ ಜೊತೆ ಮಸಣದ ಹಾದಿ ತುಳಿಯುವಂತಾಗಿ, ವಿಧಿಯಾಟಕ್ಕೆ ಕುಟುಂಬ ಕಣ್ಣೀರಿಡುವಂತಾಗಿದೆ.

    300x250 AD

    ಮನೆಯ ಯಜಮಾನನನ್ನು ಕಳೆದುಕೊಂಡ ದುಃಖದಲ್ಲಿದ್ದ ಪತ್ನಿಗೆ , ಮಗನೂ ಇನ್ನಿಲ್ಲದಂತಾಗಿರುವುದು ಸಂಸಾರದ ನೊಗ ಹೊರಬೇಕಾಗಿ ಬಂದಿರುವುದು ವಿಧಿಯ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ. ನೊಂದ ಬಡ ಕುಟುಂಬಕ್ಕೆ ಕೇವಲ ಸಾಂತ್ವನ ಹೇಳಿದರೆ ಅಷ್ಟೇ ಸಾಲದೇ ಮಾನವೀಯ ನೆಲೆಯಲ್ಲಿ,ಸಂಘ-ಸಂಸ್ಥೆಗಳು ಜನಪ್ರತಿನಿಧಿಗಳು,ಇತರರು ನೆರವಿನ ಹಸ್ತ ಚಾಚ ಬೇಕಿದೆ. ಒಂದೇ ದಿನ ತಂದೆ ಮತ್ತು ಮಗ ಮರಣ ಹೊಂದುವ ಮೂಲಕ ಗ್ರಾಮಸ್ಥರಲ್ಲಿ ಶೋಕದ ಛಾಯೆ ಆವರಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top