• first
  second
  third
  Slide
  Slide
  previous arrow
  next arrow
 • ನ.17ಕ್ಕೆ ಯಶಸ್ವಿನಿ ಯೋಜನೆ ಕುರಿತು‌ ಕಾರ್ಯಾಗಾರ

  300x250 AD

  ದಾಂಡೇಲಿ: ಸಹಕಾರಿ ಸಪ್ತಾಹದ ಅಂಗವಾಗಿ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ದಾಂಡೇಲಪ್ಪ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನ.17ರ ಬೆಳಿಗ್ಗೆ 11 ಗಂಟೆಗೆ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಪೂಜಾರಿ ತಿಳಿಸಿದ್ದಾರೆ.

  ಸಹಕಾರಿ ಸಪ್ತಾಹದ ಅಂಗವಾಗಿ ರಾಜ್ಯ ಸರಕಾರ ಘೋಷಿಸಿರುವ ಯಶಸ್ವಿನಿ ಯೋಜನೆಯ ಬಗ್ಗೆ ಹಾಗೂ ಆರೋಗ್ಯವರ್ಧಕ ಸಿರಿ ಧಾನ್ಯಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮಾಹಿತಿ ಕಾರ್ಯಾಗಾರದಲ್ಲಿ ಸಂಘದ ಸದಸ್ಯರು, ಗ್ರಾಹಕರು, ರೈತ ಬಾಂಧವರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೃಷ್ಣ ಪೂಜಾರಿಯವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಸಹಾಯಕ ವ್ಯವಸ್ಥಾಪಕರಾದ ದೇಮಾಣಿ ಮಿರಾಶಿಯವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top