Slide
Slide
Slide
previous arrow
next arrow

ವಿದ್ಯೆ ಯಾರೊಬ್ಬನ ಆಸ್ತಿಯಲ್ಲ, ಅದು ಸಾರ್ವತ್ರಿಕ: ವಿದ್ಯಾ ನಾಯಕ

300x250 AD

ಗೋಕರ್ಣ: ವಿದ್ಯೆ ಯಾರೊಬ್ಬನ ಆಸ್ತಿಯಲ್ಲ, ಅದು ಸಾರ್ವತ್ರಿಕ ಮತ್ತು ಸಮದರ್ಶಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅತೀ ಅವಶ್ಯವಿರುವ ಎಕ್ಸಾಮ್ ಪ್ಯಾಡ್ ನೀಡಿದ ರಾಧಾಕೃಷ್ಣ ಮತ್ತು ರಮ್ಯಶ್ರೀ ಗೋಕರ್ಣ ದಂಪತಿ ಸೇವಾ ಮನೋಭಾವನೆ ಹಾಗೂ ಶೈಕ್ಷಣಿಕ ಕಾಳಜಿ ಹೀಗೆ ಮುಂದುವರೆಯಲಿ ಎಂದು ಶಾಲಾ ಮುಖ್ಯಾಧ್ಯಾಪಕಿ ವಿದ್ಯಾ ನಾಯಕ ನುಡಿದರು.
ಅವರು ಹೊಸ್ಕೇರಿ- ಕಡಿಮೆ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಗೋಕರ್ಣದ ರಾಧಾಕೃಷ್ಣ ಮತ್ತು ರಮ್ಯಶ್ರೀ ದಂಪತಿ ನೀಡಿದ ಎಕ್ಸಾಮ್ ಪ್ಯಾಡ್ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದರು. ಸೇವೆಯ ಪ್ರತಿಫಲ ಸೇವೆ ಎಂಬಂತೆ ನಮ್ಮ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಯನ್ನು ಈಡೇರಿಸಿದ ದಾನಿಗಳಿಗೆ ಶುಭ ಹಾರೈಸಿ, ದಾನಿಗಳಿಂದ ಎಕ್ಸಾಮ್ ಪ್ಯಾಡ್ ವಿದ್ಯಾರ್ಥಿಗಳಿಗೆ ಕೊಡಿಸಲು ಪ್ರಯತ್ನಿಸಿದ ಶಿಕ್ಷಕಿ ಹೇಮಾವತಿ ಅಂಬಿಗರಿಗೆ ಅಭಿನಂದಿಸಿದರು.
ಪ್ರಾಸ್ತಾವಿಕ ಮಾತನಾಡಿದ ಶಿಕ್ಷಕ ಆನಂದ ನಾಯ್ಕ ಬರ್ಗಿ, ನೆಹರೂರವರ ಜೀವನಶೈಲಿ, ಅವರ ಆದರ್ಶ ವ್ಯಕ್ತಿತ್ವ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರಿಂದ ಪ್ರೇರೇಪಿತರಾಗಿ ತೊಡಗಿದ ರೀತಿಗಳನ್ನ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಲಾ ಮಂತ್ರಿ ಮಂಡಳದ ನಾಯಕಿ ವೈಶಾಲಿ ಗೌಡ ಮಾತನಾಡಿದರು.
ಗಾಳಿಪಟ, ರಂಗೋಲಿ ಸ್ಪರ್ಧೆ, ಪೇಪರ್ ಪಿರಾಮಿಡ್, ಸೂಜಿದಾರ ಹೀಗೆ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಾಯೋಜಕಿ ಮುಖ್ಯಾಧ್ಯಾಪಕಿ ವಿದ್ಯಾ ನಾಯಕರವರು ಬಹುಮಾನ ವಿತರಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಸುಕ್ರು ಗೌಡ, ಉಪಾಧ್ಯಕ್ಷೆ ನೇತ್ರಾ ಗೌಡ, ಎಸ್‌ಡಿಎಮ್‌ಸಿ ಸದಸ್ಯರು, ಪಾಲಕರು ಹಾಗೂ ಶಿಕ್ಷಕರಾದ ಉಮಾ ನಾಯ್ಕ, ಲತಾ ಗೌಡ, ದೇವಯಾನಿ ನಾಯಕ, ಸರಿತಾ ಆಚಾರಿ, ಹೇಮಾವತಿ ಅಂಬಿಗ, ವೈಶಾಲಿ ನಾಯಕ ಉಪಸ್ಥಿತರಿದ್ದರು.
ಕಾರ್ಯಕ್ರಮವು ದೀಕ್ಷಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಪೂರ್ವಿ ಗೌಡ ಸರ್ವರನ್ನೂ ಸ್ವಾಗತಿಸಿದರು. ಹರ್ಷಿತಾ ಗುನಗಾ ಕಾರ್ಯಕ್ರಮ ನಿರ್ವಹಿಸಿದರು. ನಿಖಿತಾ ಆಗೇರ ಸರ್ವರನ್ನೂ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದಲೇ ಸಭಾ ಕಾರ್ಯಕ್ರಮ ನಡೆದಿದ್ದು, ಈ ಬಗ್ಗೆ ಎಸ್‌ಡಿಎಮ್‌ಸಿ ಸಮಿತಿ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top