Slide
Slide
Slide
previous arrow
next arrow

ಮೊದಲ ಪ್ರಯತ್ನದಲ್ಲೇ ಉತ್ತಮ ಸಾಧನೆ ತೋರಿದ ಚಂದನ ವಿದ್ಯಾರ್ಥಿಗಳು

300x250 AD

ಶಿರಸಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸಹಪಠ್ಯಗಳ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ನಗರದ ಚಂದನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಸಪ್ರಶ್ನೆಯಲ್ಲಿ ಡಿ.ಎಸ್.ದೀಕ್ಷಾ, ಚಿನ್ಮಯ್ ಜೋಶಿ ಪ್ರಥಮ ಸ್ಥಾನ, ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶ್ರೀನಿಧಿ ತಿರುಮಲೆ ಪ್ರಥಮ ಸ್ಥಾನ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಿಂಚನ ಹೆಗಡೆ, ಭಾವಗೀತೆಯಲ್ಲಿ ಕೃತಿಕಾ ಭಟ್, ಚಿತ್ರಕಲೆಯಲ್ಲಿ ಪ್ರಿಯಾ ಶೇಟ್, ಭಕ್ತಿಗೀತೆಯಲ್ಲಿ ಪೂರ್ವಿ ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಆಶುಭಾಷಣದಲ್ಲಿ ತ್ರಿವೇಣಿ ಎಎಸ್ ಕನ್ನಡ ಪ್ರಬಂಧದಲ್ಲಿ ಸಿಂಧು ಎಂ. ನಾಯ್ಕ್ ತೃತಿಯ ಸ್ಥಾನ ಗಳಿಸಿದ್ದಾರೆ ಮೊದಲ ಪ್ರಯತ್ನದಲ್ಲೇ ಯಶಸ್ಸುಗಳಿಸಿದ ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top