ದಾಂಡೇಲಿ: ನಗರದ ಗಣೇಶಗುಡಿ ಬಳಿಯ ಹರೇಗಾಳಿಯ ಡ್ರೀಮ್ ಫ್ಲವರ್ ರೆಸಾರ್ಟ್’ನಲ್ಲಿ ಡಾನ್ಸ್, ವೇಶ್ಯಾವಾಟಿಕೆ ನಡೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಓರ್ವ ರಾಜಕೀಯ ಮುಖಂಡರಿಗೆ ಸೇರಿದ ರೆಸಾರ್ಟ್ ಇದಾಗಿದ್ದು, ಡಾನ್ಸ್, ವೇಶ್ಯಾವಾಟಿಕೆಗೆಂದು ಬಂದಿದ್ದ ಆಂಧ್ರಪ್ರದೇಶ ಮೂಲದ 7 ಯುವತಿಯರು ಹಾಗು ತೆಲಂಗಾಣದ ಓರ್ವ ಯುವತಿಯನ್ನು ರಕ್ಷಿಸಲಾಗಿದೆ. ನವೆಂಬರ್ 13ರ ರಾತ್ರಿ ಸುಮಾರು 7.15 ರ ವೇಳೆ ಪೊಲೀಸರು ದಾಳಿ ನಡೆಸಿದ್ದು, ರೆಸಾರ್ಟ್ ಮ್ಯಾನೇಜರ್, ಆಂಧ್ರದ ಗೋವಿಂದು ಸುಂದರ್ ರಾವ್,ತೆಲಂಗಾಣದ ಮಧುಸೂಧನ್ ಶಿವರಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾಂಡೇಲಿ ಡಿವೈಎಸ್ಪಿ ಕೆ.ಎಲ್.ಗಣೇಶ್ ನೀಡಿದ ದೂರಿನನ್ವಯ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.